|
76ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಗದಗ
ಗದಗಿನ ವೀರನಾರಾಯಣನ ಗೂಡು ಹಾಗೂ ಕುಮಾರವ್ಯಾಸನ ಕರ್ಮಭೂಮಿಯಲ್ಲಿ ಆಯೋಜಿಸಲಾಗಿರುವ 76ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕನ್ನಡಕವಿ ಬಳಗದ ಶುಭ ಹಾರೈಕೆಗಳು. ಜನಸಮಾನ್ಯರ ನೋವು ನಲಿವುಗಳನ್ನು ಹತ್ತಿರದಿಂದ ಬಲ್ಲ ಈ ಬಾರಿ ಸಮ್ಮೇಳನ ಅಧ್ಯಕ್ಷೆಖ್ಯಾತ ಕಾದಂಬರಿಗಾರ್ತಿ ಗೀತಾ ನಾಗಭೂಷಣ ಅವರ ನೇತೃತ್ವದಲ್ಲಿ ಅಕ್ಷರ ಜಾತ್ರೆ ಸಂಭ್ರಮ. ಫೆಬ್ರವರಿ 19, 20 ಹಾಗೂ 21 ಮೂರು ದಿನಗಳ ಕಾಲ ಗದಗ ನಗರದಲ್ಲಿ ಸಾಹಿತ್ಯ ಜಾತ್ರೆ ನಡೆಯಲಿದೆ. ನೆರೆಪೀಡಿತ ಪ್ರದೇಶದಲ್ಲಿ ಜನ ತಮ್ಮ ನೋವನ್ನು ಮರೆತು ಸಾಹಿತ್ಯ ಪ್ರೇಮಿಗಳ ಸತ್ಕಾರಕ್ಕೆ ಕಾದಿದ್ದಾರೆ. ದೂರ ಊರಿಂದ ಸಮ್ಮೇಳನಕ್ಕೆ ಬರುವ ಸಾಹಿತ್ಯ ಪ್ರೇಮಿಗಳೇ, ದಯವಿಟ್ಟು ಜಲಪ್ರಳಯದಿಂದ ತತ್ತರಿಸಿರುವ ಈ ಭಾಗದ ಜನರಿಗೆ ನೆರವಾಗಿ, ಅವರಿಗೆ ಒಂದಿಷ್ಟು ಸಾಂತ್ವನ ಹೇಳಿಬನ್ನಿ...
ಗೀತಾ ನಾಗಭೂಷಣ ಗದಗ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ ಕಿರು ಪರಿಚಯಇಲ್ಲಿ ಕ್ಲಿಕ್ ಮಾಡಿ
ಸಮಗ್ರ ವರದಿ ವಿವಿಧ ಮೂಲಗಳಿಂದ
*ಕನ್ನಡ ಸಂಸ್ಕೃತಿ ಕಲೆ ಅನಾವರಣಕ್ಕೆ ಗದಗ ಸಜ್ಜು
*ಸಾಹಿತ್ಯ ಸಮ್ಮೇಳನ ವಿವರಗಳಿಗೆ ಕಸಾಪ ವೆಬ್ ಸೈಟ್
*ಸಾಹಿತ್ಯ ಸಮ್ಮೇಳನಕ್ಕೆ ಹಣದ ಕೊರತೆ ಇಲ್ಲ
*ಈ ಬಾರಿ ಸಮ್ಮೇಳನದ ಊಟದ ಮೆನು
*ಸಾಹಿತ್ಯ ಪ್ರೇಮಿಗಳ ಸ್ವಾಗತಕ್ಕೆ ಮಹಾದ್ವಾರ
ಓ ಕಬ್ಬಿಗನೆ, ನಿನ್ನೊಳಿಹ ಕಲೆಗೆ ಶಕ್ತಿಯಿದೆ
ಜಡವ ಚೇತನಗೊಳಿಪ ದಿವ್ಯತರ ಮುಕ್ತಿಯಿದೆ
ಮನುಜರಿಗೆ ಸೊಗಮೀವ ಕರ್ತವ್ಯವೊಂದೆ
ನಿನ್ನದೆಂದರಿಯದಿರು ; ನಿನ್ನ ಕಲೆಯಿಂದೆ
ನೂರಾರು ಆತ್ಮಗಳು ಜಡತನದ ಬಲೆಯಿಂದೆ
ಬಿಡುಗಡೆಯ ಹೊಂದುವುವು
-ಕುವೆಂಪು
|