ಕವನಗಳು>ಮೂಕಮಾಲೆ
 
|| ಮೂಕಮಾಲೆ ||
 
ಮೂಕ ಮಾಲೆಯ ನೀನು ಹಾಕಿ
ನನ್ನ ಹೀಗೆ ಕಾಡದಿರು ಸಖಿ
 
ಒಮ್ಮೆಯಾದರೂ ಮನ ಬಿಚ್ಚಿನಕ್ಕು
ನನ್ನೊಡನೆ ಪ್ರೀತಿಯ ಮಾತನಾಡು
ಇಲ್ಲ ಸಲ್ಲದ ನೆಪವ ಹೂಡಿ
ಎಲ್ಲವುದಕ್ಕೂ ಒಲ್ಲೆ ಎನ್ನದಿರು
 
ಲೋಕ ಕಂಡ ಎಲ್ಲ ಜೀವ
ಪ್ರೀತಿ ಮೂಲದಿಂದಲೆ ತಾನೆ
ಹೇಗೆ ಸಂತೈಸಲಿ ನನ್ನ ಮನವ
ನಿನ್ನ ಪ್ರೀತಿ ಸಿಗದ ಮೇಲೆ
 
ಅತ್ತ ಇತ್ತ ಎತ್ತ ನೀ ಹೋದರು
ನೆರಳಿನಂತೆ ಹಿಂದೆ ನಾ ಬರುವೆ
ಒಂದು ಕ್ಷಣವು ನಿನ್ನ ನಾ ಬಿಡದೆ
ನನ್ನ ಮನದಲ್ಲಿ ಬಚ್ಚಿ ಇಡುವೆ
 
ನಿನ್ನ ಪ್ರೀತಿಯ ನಾನು ಅರಿವೆ
ಆದರೇಕೆ ನೀ ಅದ ಹುದುಗಿಸುತಿರುವೆ
ಒಮ್ಮೆ ನಿನ್ನ ಮನದ ಮಾತ ಹೇಳು
ಭಯವೆಲ್ಲ ಹೇಗೆ ಹೋಗುವುದು ನೋಡು
 
- ಹರ್ಷ
 
|| ~~~ ||