| ಕವನಗಳು>ಸಂಜೆ | ||
| || ಸಂಜೆ || | ||
|
ಸೊಗಸಾದ ಸಂಜೆ ಒಂದು ನಿನ್ನೊಡನೆ ಕಳೆದಿದ್ದೆ ಚೆಲುವೆ ನೂರೆಂಟು ಚಿಂತೆಯ ನೀ ಮರೆಸಿದ್ದೆ. | ||
|
ಚಿಲಿ ಪಿಲಿ ಹಕ್ಕಿಗಳು ಗೂಡಿನೆಡೆಗೆ ಹಾರುತಿರಲು ಕೆಂಪು ಬಣ್ಣದ ಚಿತ್ತಾರವು ಆಗಸವ ಏರುತಿರಲು ಆ ಏಕಾಂತದಲಿ ಪ್ರೇಮದ ಹಾಡು ಕೇಳಿಬರಲು ಮನವು ಸಂತಸದಿ ಕನಸಿನ ಲೋಕವ ಸೇರಿತು. | ||
|
ಬೇರೆ ಯಾರೂ ಇರಲಿಲ್ಲ ನಮ್ಮ ನಡುವೆ ಸಂತಸದಿ ಏನೂ ತೋಚದೆ ಸುಮ್ಮನೆ ಮಾತನಾಡಿದೆ ಮನ ತುಂಬಿ ಬಂದಾಗ ನಿನ್ನ ಕೈಹಿಡಿದೆ ಮೈ ಮನವು ರೋಮಾಂಚನವಾಯಿತು ಅಂದು ಆ ಸಂಜೆ. | ||
|
ನಿನ್ನ ಮನದಾಸೆಯು ನಾಚಿಕೆಯಿಂದ ಮೌನದ ಸೆರೆಯಾಗಿತ್ತು ಕೆನ್ನೆ ಕೆಂಪಾಗಿ ಪ್ರೇಮದ ಬಯಲು ಮಾಡಿತ್ತು ಎಲ್ಲವುದಕ್ಕೂ ನನಗೆ ಸಮ್ಮತಿಯ ನೀಡಿತು ಹೀಗೆ ನಿಲ್ಲಬಾರದೆ ಈ ಸಂಜೆ ಎಂದಿತು ಮನವು. | ||
| - ಹರ್ಷ | ||
| || ~~~ || | ||