1 | 2 | 3 | 4
 
~~~ ಗಾದೆಗಳು 4 ~~~
 
೩೦೧. ಬಾಯಿ ಬಂಗಾರ, ಮನ ಅಂಗಾರ.
೩೦೨. ಬಾಯಿಯಿದ್ದ ಮಗ ಬದುಕುವನು.
೩೦೩. ಭಾರವಾದ ಪಾಪಕ್ಕೆ ಘೋರವಾದ ನರಕ.
೩೦೪. ಬೀಜದಂತೆ ವೃಕ್ಷ, ವೃಕ್ಷದಂತೆ ಬೀಜ.
೩೦೫. ಬಿಸಿಯಾದರೆ ಮಾತ್ರ ಬೆಣ್ಣೆ ಕರಗುವುದು.
೩೦೬. ಕಲಿತವನಿಗಿಂತ ನುರಿತವನೇ ಮೇಲು.
೩೦೭. ಕಷ್ಟದಂತೆ ಫಲ, ಮನದಂತೆ ಮಹಾದೇವ.
೩೦೮. ಕೀಟ ಸಣ್ಣದಾದರೂ ಕಾಟ ಬಹಳ.
೩೦೯. ಕುರಿ ಹಿಂಡಲ್ಲಿ ತೋಳ ಹೊಕ್ಕಂತೆ.
೩೧೦. ಕೂಳಿಗೆ ಮೂಲ ಭೂಮಿಗೆ ಭಾರ.
೩೧೧. ಕೇಳುವವರ ಮುಂದೆ ಹೇಳುವವರು ದಡ್ಡರು.
೩೧೨. ಹಿರಿಯರಿಗೆ ಶಿರಬಾಗು, ಗುರುವಿಗೆ ತಲೆಬಾಗು.
೩೧೩. ಹಿಡಿ ತುಂಬ ಹಣವಿದ್ದರು ಗುಡಿ ಚೆನ್ನಾಗಿರಬೇಕು.
೩೧೪. ಹಸಿದವನಿಗೆ ಹಳಸಿದ್ದೇ ಪಾವನ.
೩೧೫. ಹರಿದಿದ್ದೇ ಹಳ್ಳ, ನಿಂತಿದ್ದೇ ತೀರ್ಥ.
೩೧೬. ಸುಳ್ಳು ಹೇಳುವುದಕ್ಕಿಂತ ಸುಮ್ಮನಿರುವುದು ಲೇಸು.
೩೧೭. ಸುಣ್ಣ ತಿಂದ ಮಂಗ ಹಲ್ಲು ಕಿಸಿದಂತೆ.
೩೧೮. ಸುಡುಗಾಡಿನಲ್ಲಿ ಕುಳಿತು ಸುಖ ಬಯಸಿದಂತೆ.
೩೧೯. ಎಣ್ಣೆ ತಣ್ಣಗಾದರೆ ಬೆಣ್ಣೆಯ ಹಾಗೆ ಇದ್ದೀತೆ?
೩೨೦. ಅಹಂಕಾರ ಇದ್ದ ಮನುಷ್ಯ ಏನನ್ನೂ ಸಾಧಿಸಲಾರ.
೩೨೧. ಕಡಲೆಗೆ ಮುಂದು ಕಡಿವಾಣಕ್ಕೆ ಹಿಂದು.
೩೨೨. ಆಸೆಯೇ ಜೀವನ, ಜೀವನವೇ ಆಸೆ.
೩೨೩. ಎಡವಿದ ಕಾಲೇ ಎಡವುದು ಹೆಚ್ಚು.
೩೨೪. ಸಾವಿಲ್ಲದ ಮನೆಯಿಲ್ಲ, ಸೋಲಿಲ್ಲದ ಮನುಷ್ಯನಿಲ್ಲ.
೩೨೫. ಎಣ್ಣೆ ಬರುವಾಗ ಗಾಣ ಮುರೀತು.
೩೨೬. ಆದರೆ ಹಬ್ಬ, ಇಲ್ಲದಿದ್ದರೆ ಬರಗಾಲ.
೩೨೭. ಗಿಡ ಮೂರು ಮೊಳ, ಕಾಯಿ ಆರು ಮೊಳ.
೩೨೮. ಕಂಚು ಕಡೆಯಲ್ಲ, ಹಂಚು ದ್ರವ್ಯವಲ್ಲ.
೩೨೯. ಭೂಮಿಯಿಂದ ಆಕಾಶಕ್ಕೆ ಏಣಿಯನ್ನು ಇಟ್ಟ.
೩೩೦. ಕಳ್ಳ ಹೊಕ್ಕ ಮನೆಗೆ ಎಣ್ಣೆ ದಂಡ.
೩೩೧. ಅಕ್ಷರ ಕಲಿಯುವುದಕ್ಕೆ ಬೇಧಭಾವ ಬೇಡ.
೩೩೨. ಉರುಳುವ ಕಲ್ಲಿಗೆ ಏನೂ ಅಂಟುವುದಿಲ್ಲ.
೩೩೩. ಪಂಜರದಲ್ಲಿ ಕಾಗೆ ಇಟ್ಟರೆ ಪಂಚಮ ಸ್ವರ ಕೊಟ್ಟೀತೆ?
೩೩೪. ಅಪಾಯ ತೀರಿತು, ದೇವರನ್ನು ಮರೆತಾಯಿತು.
೩೩೫. ಪ್ರೀತಿಗೊಂದು ಮುತ್ತು, ಹಸಿವಿಗೊಂದು ತುತ್ತು.
೩೩೬. ಕತ್ತಿ ಬಂಗಾರದ್ದಾಗಿದೆಯೆಂದು ಕತ್ತು ಕೊಯ್ದುಕೊಳ್ಳಲು ಸಾಧ್ಯವೇ?
೩೩೭. ಎಣ್ಣೆ ಚೆಲ್ಲಿದವನೂ ಅತ್ತ, ಕಾಯಿ ಚೆಲ್ಲಿದವನೂ ಅತ್ತ.
೩೩೮. ಹೊಳೆಗೆ ಸುರಿದರೂ ಅಳೆದು ಸುರಿ ಎಂದಂತೆ.
೩೩೯. ಬಾಳೆಗೊಂದು ಗೊನೆ, ಬಾಳಿಗೊಂದು ಮಾತು.
೩೪೦. ಮಾತು ಆಡಿದರೆ ಮುತ್ತಿನ ಹಾರದಂತಿರಬೇಕು.
೩೪೧. ಮರ ನೆಟ್ಟು ಪಾಪವನ್ನು ಕಳೆದುಕೋ.
೩೪೨. ಅಪ್ಪನ ಮಾತು ಕೇಳದವನು ಅಮ್ಮನ ಮಾತು ಕೇಳಿಯಾನೆ?
೩೪೩. ಮೂರು ವರ್ಷದ ಬುದ್ಧಿ ನೂರು ವರುಷದ ತನಕ.
೩೪೪. ನೀರುಗಣ್ಣಿನ ಹೆಂಗಸು ಊರು ಹಾಳು ಮಾಡಿದಳಂತೆ.
೩೪೫. ಸೆಗಣಿ ಮೇಲೆ ಕಲ್ಲು ಹಾಕಿ, ಮುಖಕ್ಕೆ ಸಿಡಿಸಿಕೊಂಡಂತೆ.
೩೪೬. ಆಸೆ ಆಕಾಶದಷ್ಟು, ಸಾಧನೆ ಸಾಸಿವೆಯಷ್ಟೇ.
೩೪೭. ಇಲಿ ಬೇಟೆಗೆ ತಮಟೆ ಬಡಿದಂಗೆ.
೩೪೮. ಉಳಿ ಸಣ್ಣದಾದರು ಕುಳಿ ತೋಡದೆ ಬಿಡಲಾರದು.
೩೪೯. ಕಡಲೆ ತಿಂದು ಕೈತೊಳೆದ ಹಾಗೆ.
೩೫೦. ಮದುವೆ ಸಂಭ್ರಮದಲ್ಲಿ ತಾಳಿ ಕಟ್ಟುವುದನ್ನೇ ಮರೆತಂತೆ.
೩೫೧. ತುಂಟ ಮಂಟಪಕ್ಕೋದರೂ ತುಂಟತನ ಬಿಡಲಿಲ್ಲ.
೩೫೨. ಹೆಂಡತಿ ಮುಂದಿರಬೇಕು, ಮಗ ಹಿಂದಿರಬೇಕು.
೩೫೩. ಕಜ್ಜಿ ಕೆರೆದಷ್ಟು ಹಿತ, ಚಾಕೂ ಮಸೆದಷ್ಟೂ ಹರಿತ.
೩೫೪. ಕೋಟಿಗೆ ಒಬ್ಬ ಕುಬೇರ, ನೋಟಕ್ಕೆ ಒಬ್ಬ ಸುಂದರ.
೩೫೫. ಜಾತಿ ಜಾತಿಗೆ ವೈರಿ, ನಾಯಿ ನಾಯಿಗೆ ವೈರಿ.
೩೫೬. ಮದುವೆ ಸಾಲ ಮಸಣಾದವರೆಗೂ.
೩೫೭. ನೂಲಿನಂತೆ ಸೀರೆ, ಬೀಜದಂತೆ ವೃಕ್ಷ.
೩೫೮. ಶ್ರೀಮಂತನ ಮನೆ ಸೀಮಂತಕ್ಕೆ ಬಡವ ಬಡಬಡಿಸಿದ ಹಾಗೆ.
೩೫೯. ಮೊಸರು ಇಟ್ಟುಕೊಂಡು ಮಜ್ಜಿಗೆಗೆ ಅತ್ತಹಾಗೆ.
೩೬೦. ಕುಡಿಗೆ ಕುಂಬಳಕಾಯಿ ಭಾರವೇ?
೩೬೧. ಮಾವನು ಇಲ್ಲದ ಮನೆಯೇಕೆ, ಹೆಂಡತಿಯಿಲ್ಲದ ಒಡವೆಯೇಕೆ?
೩೬೨. ಊಟವಿಲ್ಲದ ಉಪದೇಶಿ ಊರಿಗೆಲ್ಲಾ ನಿವಾಸಿ.
೩೬೩. ಸೋಲಿಲ್ಲದ ಸರದಾರನಿಲ್ಲ, ಸಂಗಮವಿಲ್ಲದ ಸಾವಿಲ್ಲ.
೩೬೪. ಪ್ರೇಮಿಗಳಿಲ್ಲದ ನಾಡು ಬರೀ ಶೂನ್ಯದ ಬೀಡು.
೩೬೫. ಆತ್ಮೀಯವಾದ ಪ್ರೇಮ ಅಮರವಾದದ್ದು.
೩೬೬. ಸ್ನೇಹ ಎಂಬ ಸಂಪಿಗೆ ಸುಮಧುರವಾದದ್ದು.
೩೬೭. ತಾಯಿಯ ಪ್ರೀತಿ ಸುಖವಾದದ್ದು, ತಂದೆಯ ಪ್ರೀತಿ ಮಧುರವಾದದ್ದು.
೩೬೮. ಮಮತೆಯ ಮಡಿಲಲ್ಲಿ ತೂಗಬೇಕು, ಮನಸ್ಸೆಂಬ ಬಂಧನದಲ್ಲಿ ಬೀಳಬೇಕು.
೩೬೯. ಸಂಸಾರದಲ್ಲಿ ಸುಖವಿದೆ, ಬಾಳೆಂಬ ಬಂಧನದಲ್ಲಿ ಕಷ್ಟವಿದೆ.
೩೭೦. ತಾಯಿಯನ್ನು ನಿಂದಿಸಬೇಡ, ಒಳ್ಳೆಯವರನ್ನು ಬಂಧಿಸಬೇಡ.
೩೭೧. ಮನಸ್ಸನ್ನು ನಿಯಂತ್ರಿಸಿ ಜೀವನ ಸಾಗಿಸಿ.
೩೭೨. ಮನೆ ಬೆಳಗಲಿ ದೀಪ ಬೇಕು, ಮಾನವ ಬೆಳಗಲು ಅಕ್ಷರ ಬೇಕು.
೩೭೩. ಕತ್ತೆಗೆ ತಿಪ್ಪೆಯೇ ತವರುಮನೆ.
೩೭೪. ಕತ್ತೆಗೆ ಯಾಕೆ ಹತ್ತಿಕಾಳು?
೩೭೫. ಸಣ್ಣದಿರುವಾಗ ಕತ್ತೆಯೂ ಬಹಳ ಸುಂದರ.
೩೭೬. ಕತ್ತೆಯಾಗಬೇಡ ಕಾಗೆಯಾಗು.
೩೭೭. ಕತ್ತೆಯ ಹಿಂದೆ ಹೋಳಿಹುಣ್ಣಿಮೆಯಲ್ಲಿ ಮಾತ್ರ ಹೋಗು.
೩೭೮. ಅಪದ್ದಕ್ಕೆ ಅಪ್ಪಣೆ ಕೊಟ್ರೆ ಬಾಯಿಗೆ ಬಂದದ್ದೇ ಮಾತು.
೩೭೯. ಅಪ್ಪ ಮಾಡಿದ ಪುಣ್ಯ ಮಕ್ಕಳ ಕಾಲಕ್ಕೆ.
೩೮೦. ಅಪ್ಪನ ಸಾಲಕ್ಕೆ ಮಗನನ್ನು ತಿಪ್ಪೆ ಮೇಲೆ ಎಳೆದರು.
೩೮೧. ಅರಿತರೆ ಮಾತನಾಡು, ಮರೆತರೆ ಕೂತು ನೋಡು.
೩೮೨. ಆಕಾಶ ನೋಡೋಕೆ ನೂಕಾಟವೇಕೆ?
೩೮೩. ಗುರುಕೊಟ್ಟ ಜೋಳಿಗೆ ಅಂತ ಗೂಟಕ್ಕೆ ಹಾಕಿದರೆ ಊಟ ಹಾಕೀತೆ?
೩೮೪. ಜಾರುವುದು ತಪ್ಪಿದರೆ ಏರುವುದು ಸಾಧ್ಯ.
೩೮೫. ಧೂಳಿ ಧೂಪವಾದೀತೆ, ಮಾಳಿಗೆ ಸ್ವರ್ಗವಾದೀತೆ?
೩೮೬. ಬಾಳೆಂಬ ಬಂಧನದಲ್ಲಿ ಈಜಬೇಕು, ಸಂಸಾರ ಎಂಬ ಸಾಗರದಲ್ಲಿ ತೇಲಬೇಕು.
೩೮೭. ಹೆಸರು ಸಂಪತ್ತು, ಕೂಳಿಗಿಲ್ಲ ಒಪ್ಪತ್ತು.
೩೮೮. ನೇಯುವ ಕಾಲ ತಪ್ಪಿದರೂ, ಸಾಯುವ ಕಾಲ ತಪ್ಪದು.
೩೮೯. ಕೀಳನ ಕೆಣಕಬೇಡ, ಮೇಗಾಲು ತುರಿಸಬೇಡ.
೩೯೦. ಹೊಟ್ಟೆ ತುಂಬಿದ ಮೇಲೆ ಕಜ್ಜಾಯವೂ ವಿಷ
೩೯೧. ದೇವರನ್ನು ಬಯ್ಯುವವರು ಅರ್ಚಕನನ್ನು ಬಿಟ್ಟಾರೆ?
Top
~~~~~~~~~~~~~~~~~~