ನಾ.ಕಸ್ತೂರಿ
 
ಸ್ವ-ವಿವರ
 
ಕಾವ್ಯನಾಮ : ನಾ. ಕಸ್ತೂರಿ
ನಿಜನಾಮ/ಪೂರ್ಣನಾಮ : ನಾರಾಯಣ ಕಸ್ತೂರಿ
ಜನನ : ೧೮೯೭ ಡಿಸೆಂಬರ್ ೧೫.
ಮರಣ : ೧೯೮೭ರ ಆಗಷ್ಟ್ ೧೪, ಪುಟ್ಟಪರ್ತಿ.
ತಂದೆ : ತ್ರಿಪ್ಪೂನಿತುರ, ಕೊಚ್ಚಿನ್, ಕೇರಳ
ತಾಯಿ:  
ಜನ್ಮ ಸ್ಥಳ :  
ಮನೆ, ಮನೆತನ :  
ಪತ್ನಿ :  
ವಿವಾಹವಾದ ದಿನ :  
ಮಕ್ಕಳು :  
 
ವಿದ್ಯಾಭ್ಯಾಸ :
ಪ್ರಾಥಮಿಕ : ಕೊಚ್ಚಿನ್
ಪ್ರೌಢಶಾಲೆ : ಕೊಚ್ಚಿನ್
ಕಾಲೇಜು:  
ಪದವಿ: ಎಂ.ಎ ಮತ್ತು ಬಿ.ಎಲ್ ಪದವಿ
 
ವೃತ್ತಿ:
ಬನುಮಯ್ಯನವರ ವಿದ್ಯಾಸಂಸ್ಥೆಗಳ ಪ್ರೌಢಶಾಲೆಯಲ್ಲಿ ಇತಿಹಾಸ ಅಧ್ಯಾಪಕರಾಗಿ ಏಳು ವರ್ಷ ಕೆಲಸ ಮಾಡಿದರು.
ಮೈಸೂರಿನ ವಿಶ್ವವಿದ್ಯಾನಿಲಯದ ಇಂಟರ್‌ಮೀಡಿಯೆಟ್ ಕಾಲೇಜು ಹಾಗೂ ಇನ್ನಿತರ ಕಾಲೇಜುಗಳಲ್ಲಿ ಉಪಪ್ರಾಧ್ಯಾಪಕರಾಗಿ, ಸೂಪರಿನ್‌ಡೆಂಟರಾಗಿ ಸೇವೆ ಸಲ್ಲಿಸಿ ೧೯೫೫ರಲ್ಲಿ ನಿವೃತ್ತರಾದರು.
೧೯೫೫-೫೭ರಲ್ಲಿ ಆಕಾಶವಾಣಿಯಲ್ಲಿ ಸಹಾಯಕ ನಿರ್ಮಾಪಕರಾಗಿದ್ದರು.
೧೯೫೮ರಲ್ಲಿ ಪುಟ್ಟುಪರ್ತಿಗೆ ಹೋದವರು 'ಸನಾತನ ಸಾರಥಿ' ಎಂಬ ಆಧ್ಯಾತ್ಮಿಕ ಪತ್ರಿಕೆಯ ಸಂಪಾದಕರಾಗಿ ಕೆಲಸ ಮಾಡಿದರು.
 
ಸಾಹಿತ್ಯಕೃತಿಗಳು :
ನಾ. ಕಸ್ತೂರಿಯವರು 'ಕೊರವಂಜಿ'- ಹಾಸ್ಯ ಪತ್ರಿಕೆಗೆ ಇಪ್ಪತೈದು ವರ್ಷ ಕಾಲ ಲೇಖನಗಳನ್ನು ಬರೆದರು.
ಕಾದಂಬರಿ, ಪ್ರಬಂಧ : ಅಲ್ಲೋಲ ಕಲ್ಲೋಲ, ಉಪಾಯವೇದಾಂತ, ಡೊಂಕುಬಾಲ, ಚಕ್ರದೃಷ್ಟಿ, ಯದ್ವಾತದ್ವಾ, ಗಾಳಿಗೋಪುರ, ಶಂಖವಾದ್ಯ, ಗೃಹದಾರಣ್ಯಕ, ಚೆಂಗೂಲಿ ಚೆಲುವ.
ನಾಟಕಗಳು : ಗಗ್ಗಯನ ಗಡಿಬಿಡಿ, ಕಾಡಾನೆ, ವರಪರೀಕ್ಷೆ.
ಅನುವಾದಿತ ಕೃತಿಗಳು : ಪಾತಾಳದಲ್ಲಿ ಪಾಪಚ್ಚಿ-ಆಲಿಸ್ ಇನ್ ವಂಡರ್ ಲ್ಯಾಂಡ್
ದಿಲ್ಲೀಶ್ವರನ ದಿನಚ್ರಿ-ಬಾಬರನ ಆತ್ಮ ಚರಿತ್ರೆ
ನೊಂದ ಜೀವಿ-ವಿಕ್ಟರ್ ಹ್ಯೋಗೋನ 'ಲೇಮಿಸರ್ ಬಲ್ಸ್'
ಕೆಂಪು ಮೀನು- ಚೆಮ್ಮೀನ್-ತಕಳಿ ಶಿವಶಂಕರ ಪಿಳ್ಳೆ
ಎರಡು ಬಳ್ಳ-ತಕಳಿ ಶಿವಶಂಕರ ಪಿಳ್ಳೆ
ಅಶೋಕ, ಮದುವೆ, ಇತರ ಕೃತಿಗಳು
ಚೈನಾ, ಜಪಾನ್ ದೇಶದ ಕಥೆಗಳು ಮಕ್ಕಳಿಗಾಗಿ ಬರೆದ ಕೃತಿಗಳು
ಸಂಪಾದಿತಕೃತಿಗಳು : ಇವರು ಪುಟ್ಟಪರ್ತಿಯಲ್ಲಿದ್ದಾಗ 'ಸತ್ಯಂ ಶಿವಂ ಸುಂದರಂ' ಎಂಬ ಶೀರ್ಷಿಕೆಯಲ್ಲಿ ಶ್ರೀ ಸತ್ಯ ಸಾಯಿಬಾಬಾರವರ ಭಾಷಣಗಳನ್ನು ಹನ್ನೆರಡು ಸಂಪುಟಗಳಲ್ಲಿ ಸಂಪಾದಿಸಿದರು.
ವಿಮರ್ಶಾ ಗ್ರಂಥಗಳು :  
ಜೀವನ ಚರಿತ್ರೆ :  
 
ಪ್ರಶಸ್ತಿ, ಪುರಸ್ಕಾರ, ಬಿರುದು:
೧೯೮೧ರಲ್ಲಿ ಕರ್ನಾಟಕ ರಾಜ್ಯಸಾಹಿತ್ಯ ಅಕಾಡೆಮಿ ಕಸ್ತೂರಿಯವರನ್ನು ಪುರಸ್ಕರಿಸಿತು.
 
 
ಕಸ್ತೂರಿಯವರನ್ನು ಕುರಿತು ಪ್ರಕಟಿತ ಪ್ರಮುಖ ಲೇಖನಗಳು :
 
ಕವಿ ಸಂದೇಶ :