| ಎಸ್.ಕೆ. ಕರೀಂ ಖಾನ್ | ||
| ಸ್ವ-ವಿವರ | ||
| ಕಾವ್ಯನಾಮ : | ಕರೀಂ ಖಾನ್ | |
| ನಿಜನಾಮ/ಪೂರ್ಣನಾಮ : | ಎಸ್.ಕೆ. ಕರೀಂ ಖಾನ್ | |
| ಜನನ : | ೧೯೦೪. | |
| ಮರಣ : | ೨೯ ಜುಲೈ ೨೦೦೬ | |
| ತಂದೆ : | ರೆಹಮಾನ್ ಖಾನ್. | |
| ತಾಯಿ: | ಜಿಹನಾಬಿ | |
| ಜನ್ಮ ಸ್ಥಳ : | ಸಕಲೇಶಪುರ, ಹಾಸನಜಿಲ್ಲೆ. | |
| ಮನೆ, ಮನೆತನ : | ಹಲಸೂರು, ಬೆಂಗಳೂರು. | |
| ವಿದ್ಯಾಭ್ಯಾಸ : | ||
| ಪ್ರಾಥಮಿಕ : | ಉರ್ದು ಶಾಲೆ, ಸಕಲೇಶಪುರ. | |
| ಪ್ರೌಢಶಾಲೆ : | ಹಾಸನದ ಪ್ರೌಢಶಾಲೆ. | |
| ಪದವಿ: | ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ. | |
| ವೃತ್ತಿ: | ||
| ಸ್ವಾತಂತ್ರ್ಯ ಹೋರಾಟಗಾರ, ಕನ್ನಡ ಏಕೀಕರಣಕ್ಕಾಗಿ ಹೋರಾಡಿದರು. | ||
| ನೌಕ ಪಡೆಯಲ್ಲಿ ವೈರ್ ಲೆಸ್ ಟೆಲಿಗ್ರಾಫ್ ಆಗಿದ್ದರು. | ||
| ಪತ್ರಕರ್ತರಾಗಿ ಉಡುಪಿಯ 'ಅಂತರಂಗ' ಪತ್ರಿಕೆ ಹಾಗೂ ಧಾರವಾಡದ 'ಲೋಕಮಿತ್ರ' ಪತ್ರಿಕೆಯ ಸಂಪಾದಕರಾಗಿ ಕಾರ್ಯನಿರ್ವಹಿಸಿದರು. | ||
| ಚಿತ್ರಸಾಹಿತಿ ಹಾಗೂ ಸಂಭಾಷಣಕಾರರಾಗಿ ಸೇವೆ ಸಲ್ಲಿಸಿದರು. | ||
| ಸಾಹಿತ್ಯಕೃತಿಗಳು : | ||
| ಕಥಾಸಂಕಲನ : | ನಿವಾರ, ನಿಹಾರ. | |
| ಕಾದಂಬರಿ : | ಸಮೀರ, ಬಷೀರ, ಬಲಿಗಾನಿ, ಹುಸೇನ್. | |
| ನಾಟಕಗಳು : | ನಿರ್ದೋಷಿ, ಮಧು ಮೋಹನ(೩೦೦ಕ್ಕೂ ಅಧಿಕ ಪ್ರದರ್ಶನ ಕಂಡಿದೆ), ಹಣವೋ ಗುಣವೋ, ಕೃಷ್ಣಲೀಲಾ. ಮಾಗಡಿ ಕೆಂಪೇಗೌಡ, ಬೆಂಗಳೂರು ಕೆಂಪೇಗೌಡ, ಲೈಲಾ ಮಜ್ನು, ಹುಮಾಯೂನ್. |
|
| ಚಿತ್ರ ಸಾಹಿತಿಯಾಗಿ ೨೬ ಚಿತ್ರಗಳಿಗೆ ಚಿತ್ರಕಥೆ, ಸಂಭಾಷಣೆ ರಚಿಸಿದರು, ೨೦೦ ಕ್ಕೂ ಹೆಚ್ಚು ಚಿತ್ರಗೀತೆಗಳನ್ನು ರಚಿಸಿದ್ದಾರೆ. | ||
| ಜಾನಪದ ಸಂಗ್ರಹಣಾಕಾರರಾಗಿ ಜಾನಪದ ಕಲೆಯ ಬಗ್ಗೆ ೨೪೦ ಗಂಟೆ ವಿಡಿಯೋಚಿತ್ರೀಕರಣ ನಡೆಸಿದರು. ಸೊಗಸಾಗಿ ಜಾನಪದ ಗೀತೆಗಳನ್ನು ಹಾಡುತ್ತಿದ್ದರು. | ||
| ಪ್ರಶಸ್ತಿ, ಪುರಸ್ಕಾರ, ಬಿರುದು: | ||
| ಸಾವಿರ ಹಾಡುಗಳ ಸರದಾರ, ಜಾನಪದ ಜಂಗಮ. | ||
| ೧೯೮೫ ರಲ್ಲಿ ಜಾನಪದ ಅಕಾಡೆಮಿ ಅಧ್ಯಕ್ಷರಾಗಿದ್ದರು. | ||
| ೧೯೯೫ ರಲ್ಲಿ ಜನಪದ ಶ್ರೀ ಪ್ರಶಸ್ತಿ. | ||
| ೧೯೯೭ ರಲ್ಲಿ ನಾಡೋಜ ಪ್ರಶಸ್ತಿ. | ||
| ೧೯೯೮ ರಲ್ಲಿ ಹಂಸರತ್ನ. | ||
| ೨೦೦೪ ರಲ್ಲಿ ರಾಜ್ಯೋತ್ಸವ ಪ್ರಶಸ್ತಿ. | ||
| ಜಾನಪದ ಜಂಗಮ, ಚಿತ್ರದುರ್ಗ ಶಿವಮೂರ್ತಿ ಶರಣರ ಪ್ರಶಸ್ತಿ, | ||
| ಸ್ವರ್ಣಗೌರಿ ಚಿತ್ರದ ಹಾಡಿಗಾಗಿ ರಾಷ್ಟ್ರಪ್ರಶಸ್ತಿ ಪಡೆದರು. | ||
| ಕರೀಂ ಖಾನ್ ಕುರಿತು ಪ್ರಕಟಿತ ಪ್ರಮುಖ ಲೇಖನಗಳು, ಹೇಳಿಕೆ/ಹೊಗಳಿಕೆಗಳು: | ||
| ಕನ್ನಡ ಸಾಹಿತ್ಯ ಪರಿಷತ್ತಿನ ವಸಂತೋತ್ಸವ ಸಂದರ್ಭದಲ್ಲಿ ಕರೀಂ ಖಾನ್ ರವರು ಜನಪದ ಗೀತೆಗಳನ್ನು ಹಾಡಿ ವೇದಿಕೆಯಿಂದ ಇಳಿಯುತ್ತಿದ್ದಂತೆ 'ನೀವು ಇನ್ನೊಂದೆರಡು ನಿಮಿಷ ಹಾಡಿದ್ದರೆ ನಾನು ಅತ್ತೇ ಬಿಡುತ್ತಿದ್ದೆ' ಎಂದು ಮಾಸ್ತಿಯವರು ಹೇಳಿದರಂತೆ | ||
| ಕವಿ ಸಂದೇಶ : | ||
| ಹತ್ತು ಸಾವಿರ ಪದವ ಎತ್ತಿನ್ಮೇಲ್ಹೇರಿಕೊಂಡು ಮತ್ತೆ ಸಾವಿರ ಕ್ಕೈಲಿ ಹಿಡಿಕೊಂಡು- ಬಂದಿವ್ನಿ ಬಾರೊ ಬಸವಣ್ಣ ಬಯಲಿಗೆ 'ಸಂತೇಲಿ ಕಳೆದುಹೋದ ಮಕ್ಕಳನ್ನು ಹುಡುಕಿ ಅವರ ತಂದೆ ತಾಯಿಗಳಿಗೆ ಒಪ್ಪಿಸುವ ರೀತೀಲಿ ನಾನು ಜನಪದ ಸಾಹಿತ್ಯವನ್ನು ಸಂಗ್ರಹಿಸಿ ಸಂಪಾದಿಸುವ ಕೆಲಸ ಮಾಡಿದೆ' | ||