| ಅಸಗ | |
| ಸ್ವ-ವಿವರ | |
| ಸುಮಾರು ಕ್ರಿ.ಶ. ೮೫೩ರಲ್ಲಿ ಜೀವಿಸಿರಬಹುದು ಎಂದು ಪಂಡಿತರ ಅಭಿಪ್ರಾಯ. | |
| ಪಂಪನ ಸಮಕಾಲೀನನಾದ ಪೊನ್ನನು ಅಸಗನ ಬಗ್ಗೆ ಉಲ್ಲೇಖಿಸಿದ್ದಾನೆ. ಆದ್ದರಿಂದ ಅಸಗ ಕವಿಯು ಪೊನ್ನನಿಗಿಂತ ಹಿಂದಿನವನೆಂದು ತಿಳಿಯುತ್ತದೆ. | |
| ನಯಸೇನ ಮತ್ತು ದುರ್ಗಸಿಂಹ ಇವನನ್ನು ಸ್ಮರಿಸಿಕೊಂಡಿದ್ದಾರೆ. ಅಸಗ, ಮನಸಿಜ, ಚಂದ್ರಭಟ್ಟರೆಂಬ ಕವಿಗಳನ್ನು ಒಂದು ಪಂಕ್ತಿಯಲ್ಲಿ ದುರ್ಗಸಿಂಹನು ಕೂಡಿಸಿದ್ದಾನೆ. | |
| ಶಬ್ದಮಣಿದರ್ಪಣವನ್ನು ಬರೆದ ಕೇಶಿರಾಜನು ಅಸಗನನ್ನು ಪೂರ್ವಕವಿಗಳ ಸಾಲಿನಲ್ಲಿ ಹೆಸರಿಸಿ ಅವರ ಪ್ರಯೋಗಗಳೇ ತನ್ನ ವ್ಯಾಕರಣಕ್ಕೆ ಲಕ್ಷ್ಯಗಳೆಂದು ತಿಳಿಸಿದ್ದಾನೆ. | |
| ಜಯಕೀರ್ತಿಯ ಹೇಳಿಕೆಯಂತೆ ಕರ್ಣಾಟ ಕುಮಾರಸಂಭವವೆಂಬ ಕಾವ್ಯವನ್ನು ರಚಿಸಿದ್ದನೆಂದು ತಿಳಿಯುತ್ತದೆ. | |