ಚಾವುಂಡರಾಯ
 
ಸ್ವ-ವಿವರ
ಚಾವುಂಡರಾಯನು ಗಂಗವಾಡಿಯರಾಜನಾಗಿದ್ದ 'ನೊಳಂಬ ಕುಲಾಂತಕ' ನೆನಸಿಕೊಂಡ ಮಾರಸಿಂಹನ ಸೇನಾಧಿಪತಿಯಾಗಿದ್ದನು.
ಕ್ರಿ.ಶ. ೯೭೪ ರಲ್ಲಿ 'ಜಗದೇಕವೀರ' ನೆಂದು ಪ್ರಸಿದ್ಧನಾದ ನಾಲ್ವಡಿ ರಾಚಮಲ್ಲ ಸತ್ಯವಾಕ್ಯನಲ್ಲಿಯೂ, ಕ್ರಿ.ಶ. ೯೭೭ ರಿಂದ ಕ್ರಿ.ಶ. ೯೮೪ ರವರೆಗೆ ರಕ್ಕಸಸಂಗ ರಾಚಮಲ್ಲನಲ್ಲಿಯೂ ಚಾವುಂಡರಾಯನು ಸೇನಾಪತಿಯೂ, ಮಂತ್ರಿಯೂ ಆಗಿದ್ದನು.
ರಾಚಮಲ್ಲ ಸತ್ಯವಾಕ್ಯನೇ ಇವನಿಗೆ 'ರಾಯ' ಎಂಬ ಬಿರುದುಕೊಟ್ಟ ದೊರೆ. ರಾಯನಿಗೆ ದೊರೆತ ಇತರ ಬಿರುದುಗಳು ವೀರ ಮಾರ್ತಾಂಡ, ಸಮರ ಪರಶುರಾಮ, ಪ್ರತಿಪಕ್ಷರಾಕ್ಷಸ.
ರಾಯನು ಜೈನ ಮತಾವಲಂಬಿ. ಶ್ರವಣಬೆಳಗೊಳದ ಮೇಲೆ ಗೋಮಟೇಶ್ವರನನ್ನು ಪ್ರತಿಷ್ಠಾಪಿಸಿದ್ದು ಇವನ ಸಾಧನೆ.
ಸಾಹಿತ್ಯ ಸೇವೆಯ ಜೊತೆಗೆ ಕವಿಗಳಿಗೆ ಆಶ್ರಯದಾತನಾಗಿದ್ದನು.
ಇವನ ಬರೆದ ಕೃತಿಯು 'ಚಾವುಂಡರಾಯಪುರಾಣ' ವೆಂದು ಪ್ರಸಿದ್ಧವಾಗಿದೆ ಕನ್ನಡದ ಪ್ರಾಚೀನ ಗದ್ಯಗ್ರಂಥಗಳಲ್ಲಿ ಇದು ಕೂಡ ಒಂದು.