| ಶಿವಕೋಟಾಚಾರ್ಯ | |
| ಸ್ವ-ವಿವರ | |
| ಈತನ ಕಾಲ ಸುಮಾರು ಕ್ರಿ.ಶ. ೯೨೦. | |
| ಜೈನಕವಿ, ವಡ್ಡಾರಾಧನೆ ಎಂಬ ಗದ್ಯಗ್ರಂಥವನ್ನು ರಚಿಸಿದನು. | |
| ಇದು ಕನ್ನಡ ಸಾಹಿತ್ಯದಲ್ಲಿ ಲಭ್ಯವಿರುವ ಮೊದಲ ಗದ್ಯ ಗ್ರಂಥ. | |
| `ವಡ್ಡಾರಾಧನೆ'ಯಲ್ಲಿ ಸುಮಾರು ೧೯ ಮಹಾತ್ಮರ ಜೀವನ ಕಥೆಗಳಿವೆ. | |
| ವಡ್ಡಾರಾಧನೆ ಎಂದರೆ ವೃದ್ಧರ, ಜ್ಞಾನಿಗಳ, ಜೈನಯತಿಗಳ ಜೀವನ ಸಾಧನೆಗಳಿಗೆ ಕೊಡುವ ಗೌರವವಾಗಿರುವುದು. | |
| ವಡ್ಡಾರಾಧನೆಯನ್ನು ನಾನಾ ಬಗೆಯ ಕಥೆಗಳನ್ನು ಉಳ್ಳ ಹಳೆಗನ್ನಡದಲ್ಲಿ ರಚಿತವಾದ ಕಥಾಕೋಶವೆಂದು ಕರೆಯಬಹುದು. | |