ಭಾಸ್ಕರ (ಕ್ರಿ.ಶ. ೧೪೨೪)
 
ಸ್ವ-ವಿವರ
ಅನಂತಪುರ ಜಿಲ್ಲೆಯ ಪೆನಗೊಂಡೆ ಇವನ ಊರು ಎಂದು ಪಂಡಿತರ ಅನಿಸಿಕೆ.
ವಿಶ್ವಾಮಿತ್ರ ಗೋತ್ರದ ಬಸವಾಂಕನ ಮಗ, ಜೈನಬ್ರಾಹ್ಮಣ ಕವಿ
 
ಸಾಹಿತ್ಯಕೃತಿಗಳು :
ಜೀವಂಧರ ಚರಿತೆ -ಇವನು ಭಾಮೀನಿ ಷಟ್ಪದಿಯಲ್ಲಿ ಬರೆದ ಕಾವ್ಯ.
ಇದು ಜೀವಂಧರ ಎಂಬ ರಾಜನ ಕಥೆ. ಸಂಸ್ಕೃತದಲ್ಲಿ ವಾದೀಭಸಿಂಹಸೂರಿ ಬರೆದಿರುವ ಜೀವಂಧರ ಚರಿತ್ರೆಯ ಕನ್ನಡ ಅನುವಾದ.
ನೇಮಿಚಂದ್ರ, ಗುಣವರ್ಮ, ನಾಗವರ್ಮ, ಪೊನ್ನ, ಅಗ್ಗಳ, ಗಜಾಂಕುಶ ಮೊದಲಾದ ಪೂರ್ವ ಕವಿಗಳನ್ನು ತನ್ನ ಕಾವ್ಯದಲ್ಲಿ ಹೊಗಳಿದ್ದಾನೆ.
 
ಪ್ರಶಸ್ತಿ, ಪುರಸ್ಕಾರ, ಬಿರುದು:
ವಾಣೀವದನದರ್ಪಣ ಎಂಬುದು ಇವನ ಬಿರುದು.
 
ಕವಿ ಕುರಿತು ಪ್ರಕಟಿತ ಪ್ರಮುಖ ಲೇಖನಗಳು :
 
ಕವಿ ಸಂದೇಶ :