| ದುರ್ಗಸಿಂಹ (ಕ್ರಿ.ಶ. 1030) | |
| ಸ್ವ-ವಿವರ | |
| ಕವಿ ಈಶ್ವರಾರ್ಯ ಮತ್ತು ರೇವಾಂಬಿಕೆ ದಂಪತಿಗಳ ಮಗ. | |
| ಇವನು ಜಯಸಿಂಹ ಜಗದೇಕಮಲ್ಲನ ಅಳ್ವಿಕೆಯಲ್ಲಿ ಕಿಸುಕಾಡನಾಡಿನ ಸೈಯಡಿ ಎಂಬ ಅಗ್ರಹಾರದಲ್ಲಿ ವಾಸವಾಗಿದ್ದನು. | |
| ತಕ್ಕಮಟ್ಟಿಗೆ ಶ್ರೀಮಂತನಾಗಿದ್ದ ಕವಿಯು ತನ್ನ ಹುಟ್ಟೂರಿನಲ್ಲಿ ಹರಿಹರ ದೇವಾಲಯವನ್ನು ಕಟ್ಟಿಸಿದ. ಇವನು ಗೌತಮಗೋತ್ರದ ಕಮ್ಮೆ ಕುಲದ ಬ್ರಾಹ್ಮಣ. | |
| ಮಹಾಯೋಗಿಯಾಗಿದ್ದ ಶಂಕರಭಟ್ಟ ಎಂಬುವನು ಈತನ ಗುರು. | |
| ಇವನು ಅನೇಕ ಸಂಸ್ಕೃತ ಕವಿಗಳನ್ನು ಹೊಗಳಿದ್ದಲ್ಲದೆ ಇವನಿಗಿಂತ ಮುಂಚಿನ ಹಲವಾರು ಕನ್ನಡ ಕವಿಗಳಾದ ಶ್ರೀವಿಜಯ, ಕನ್ನಮಯ್ಯ, ಅಸಗ, ಮನಸಿಜ, ಚಂದ್ರ, ಪೊನ್ನ, ಪಂಪ, ಗಜಾಂಕುಶರನ್ನು ತನ್ನ ಕೃತಿಗಳಲ್ಲಿ ಹೆಸರಿಸಿದ್ದಾನೆ.ಇದರಿಂದ ಕವಿಗಳ ಕಾಲನಿರ್ಣಯಕ್ಕೆ ಸಹಾಯಕವಾಗಿದೆ. | |
| ಸಾಹಿತ್ಯಕೃತಿಗಳು : | |
| ದುರ್ಗಸಿಂಹ ಕರ್ಣಾಟಕ ಪಂಚತಂತ್ರ ಕಾವ್ಯವು ಇಂದು ಪ್ರಸಿದ್ಧವಾಗಿರುವ ವಿಷ್ಣುಶರ್ಮನ ಪಂಚತಂತ್ರದ ಅನುವಾದವಲ್ಲ. | |
| ಗುಣಾಢ್ಯನು ಪೈಶಾಚಿಭಾಷೆಯಲ್ಲಿ ಬರೆದ ಬೃಹತ್ಕಥೆಯನ್ನು ಆಧಾರವಾಗಿ ಇಟ್ಟುಕೊಂಡು ವಸುಭಾಗಭಟ್ಟನು ರಚಿಸಿದ ಪಂಚತಂತ್ರ ಎಂಬ ಸಂಸ್ಕೃತ ಕೃತಿಯೇ ನನ್ನ ಕಾವ್ಯಕ್ಕೆ ಆಧಾರವೆಂದು ದುರ್ಗಸಿಂಹನು ಹೇಳಿದ್ದಾನೆ. | |
| ಪಂಚತಂತ್ರಗಳಾದ ಭೇದ, ಪರೀಕ್ಷಾ, ವಿಶ್ವಾಸ, ವಂಚನೆ ಮತ್ತು ಮಿತ್ರಕಾರ್ಯ ಇವುಗಳ ಮೇಲೆ ಕಥೆ, ಉಪಕಥೆಗಳನ್ನು ಹೆಣೆದು ರಚಿಸಿದ ಕಾಲ್ಪನಿಕ ಕೃತಿ. | |
| ದುರ್ಗಸಿಂಹನು ಮತಪ್ರಚಾರಕ್ಕಾಗಿ ಕೃತಿ ರಚನೆಗೆ ತೊಡಗಿದವನಲ್ಲ. ಆದರೂ ಪಂಚತಂತ್ರದಲ್ಲಿ ಕೊಂಚ ಜೈನ ಧರ್ಮದ ಆವರಣದಲ್ಲಿ ಮೂಡಿ ಬಂದಿದೆ. | |
| ಚಂಪೂ ಸಂಪ್ರದಾಯ ಶೈಲಿಯಲ್ಲಿ ಬರೆದಿದ್ದರೂ ಸಂಸ್ಕೃತ ಶಬ್ದಗಳನ್ನು ಸೂಕ್ತವಾಗಿ ಬಳಸಲಾಗಿದೆ. ಜೊತೆಗೆ ಕನ್ನಡದ ಗಾದೆಗಳನ್ನು ಬಹಳ ಹಿತವಾಗಿ ಬಳಸಿಕೊಂಡು ಕನ್ನಡದ ಗದ್ಯದ ಬೆಳವಣಿಗೆಗೆ ಸಹಾಯ ಮಾಡಿದ್ದಾನೆ. | |
| ಪಂಚತಂತ್ರದಲ್ಲಿ ಪ್ರಾಣಿಪಕ್ಷಿ, ಜಡವಸ್ತುಗಳು ಪ್ರಧಾನ ಪಾತ್ರಗಳಾಗಿ ಮಾನವರ ರೀತಿಯಲ್ಲಿ ಮಾತನಾಡುವುದನ್ನು ಕಾಣಬಹುದು. | |
| ಇದರಲ್ಲಿ ಚಿತ್ರಿತವಾದ ಪಾತ್ರಗಳಾದ ಪಿಂಗಳಿಕ ಎಂಬ ಸಿಂಹ, ಸಂಜೀವಕ ಎಂಬ ಎತ್ತು, ಕರಟಕ ದಮನಕರೆಂಬ ನರಿಗಳು, ಹಿರಣ್ಯರೋಮ ಎಂಬ ಇಲಿ ..ಮುಂತಾದವುಗಳು ಓದುಗರ ಮನಸ್ಸಿನಲ್ಲಿ ಅಚ್ಚೊತ್ತಿದೆ ಎಂದರೆ ಅದರಲ್ಲಿ ಅತಿಶಯೋಕ್ತಿಯೇನಿಲ್ಲ. | |