| ಜಗದ್ದಳ ಸೋಮನಾಥ | |
| ಸ್ವ-ವಿವರ | |
| ಈತನ ಕಾಲ ಕ್ರಿ.ಶ. ೧೧೫೦. | |
| ಈತನು `ಕರ್ನಾಟಕ ಕಲ್ಯಾಣಕಾರಕ' ಎಂಬ ಒಂದು ವೈದ್ಯಗ್ರಂಥವನ್ನು ರಚಿಸಿದ್ದಾನೆ. | |
| ಇವನಿಗೆ `ವಿಚಿತ್ರ ಕವಿ' ಎಂಬ ಬಿರುದು ಇದೆ. | |
| ಪೂಜ್ಯಪಾದರು ವಿರಚಿಸಿದ ಸಂಸ್ಕೃತ ಗ್ರಂಥಕ್ಕೆ ಕನ್ನಡ ಭಾಷಾಂತರವಾದ `ಕರ್ಣಾಟಕ ಕಲ್ಯಾಣಕಾರಕ'ವು ವೃತ್ತಕಂದಗಳಲ್ಲಿ ರಚಿತವಾಗಿದೆ. | |
| ಇವನು ಶಾಸ್ತ್ರಕಾರನಾದರೂ ಒಳ್ಳೆಯ ಪದವಿನ್ಯಾಸ ಕೌಶಲವನ್ನು ಪಡೆದಿದ್ದ ಸಮರ್ಥಕವಿ. | |
| `ಕರ್ಣಾಟಕ ಕಲ್ಯಾಣಕಾರಕ' ಗ್ರಂಥದಲ್ಲಿ ಎಂಟು ಅಧ್ಯಾಯಗಳಿವೆ. ನಾನಾ ರೋಗಗಳ ಸ್ವರೂಪ, ನಿಧಾನ ಕ್ರಮ ಮತ್ತು ಚಿಕಿತ್ಸಾ ವಿಧಾನಗಳನ್ನು ಕವಿ ಇದರಲ್ಲಿ ಹೇಳಿದ್ದಾನೆ. | |
| ಈ ಕವಿ ಜೈನನಾದ್ದರಿಂದ ಈ ಕೃತಿಯಲ್ಲಿ ಮದ್ಯ, ಮಧು, ಮಾಂಸ ವರ್ಜಿತವಾದ ಔಷಧಿಗಳನ್ನು ಮಾತ್ರ ಹೇಳಿದ್ದಾನೆ. ಅತಿಸಾರ, ಗುಲ್ಮ ರೋಗ ಮೊದಲಾದ ಹಲವು ವ್ಯಾಧಿಗಳ ವಿಷಯವನ್ನು ಸೋಮನಾಥ ವಿಸ್ತಾರವಾಗಿ ನಿರೂಪಿಸಿದ್ದಾನೆ. |