| ಕುಮಾರವ್ಯಾಸ | |
| ಸ್ವ-ವಿವರ | |
| ಗದುಗಿನ ನಾರಾಯಣಪ್ಪ ಇವನ ಹೆಸರು. | |
| ಗದಗಿನ ಹತ್ತಿರದ ಕೋಳಿವಾಡದ ಶಾನುಭೋಗ ಮನೆತನಕ್ಕೆ ಸೇರಿದವನು. | |
| ಇವನ ಕಾಲ ಕ್ರಿ.ಶ. ೧೧೬೦. ಚಾಮರಸ, ರಾಘವಾಂಕನ ಸಮಕಾಲೀನ. | |
| ಗೋವಿಂದಪೈಗಳ ಪ್ರಕಾರ ಇವನ ಕಾಲ ಕ್ರಿ.ಶ.೧೩೩೦. ಇನ್ನೊಂದು ಮಾಹಿತಿ ಪ್ರಕಾರ ಕ್ರಿ.ಶ.೧೪೩೦. | |
| ಇವನ ಮಹಾಕಾವ್ಯ ಕರ್ಣಾಟ ಭಾರತ ಕಥಾಮಂಜರಿ ಇದಕ್ಕೆ ಕನ್ನಡ ಭಾರತ, ಗದುಗಿನ ಭಾರತ ಎಂಬ ಹೆಸರು ಇದೆ. | |
| ಮಹಾಭಾರತದ ಹದಿನೆಂಟು ಪರ್ವಗಳಲ್ಲಿ ಹತ್ತು ಪರ್ವಗಳನ್ನು ಕನ್ನಡಕ್ಕೆ ತಂದಿದ್ದಾನೆ. `ದಶಪರ್ವಭಾರತ' ಎಂದು ಕರೆಯುವುದುಂಟು. | |
| ಐರಾವತ ಎಂಬ ಗ್ರಂಥವನ್ನು ಬರೆದಿದ್ದಾನೆಂದು ಕೆಲವರ ಅಭಿಮತ. | |
| 'ಕುಮಾರವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು, ಭಾರತ ಕಣ್ಣಲಿ ಕುಣಿಯುವುದು' ಎಂದು ಕುವೆಂಪು ಹೊಗಳಿದ್ದಾರೆ. |