-->
ನಾಗವರ್ಮ -೧
 
ಸ್ವ-ವಿವರ
ತಲಕಾಡಿನ ಗಂಗರಾಜರ ಆಶ್ರಯದಲ್ಲಿದ್ದ ಕವಿ
ನಾಕಿ, ನಾಕಿಗ ಈತನ ಇತರ ಹೆಸರುಗಳು.
ವೆಂಗಿಮಂಡಲದ ವೆಂಗಿಪಳುಎಂಬ ಹೆಸರಿನ ಅಗ್ರಹಾರ ಗ್ರಾಮದ ನಿವಾಸಿಯಾಗಿದ್ದ.
ವೆಣ್ಣಮಯ್ಯನೆಂಬ ಕೌಂಡಿನ್ಯಗೋತ್ರದ ಬ್ರಾಹ್ಮಣನ ಮಗ ನಾಗವರ್ಮ.
ಮುಂದೆ ಸಯ್ಯಡಿ ಎಂಬ ಗ್ರಾಮಕ್ಕೆ ಹೋದನೆಂದು ವಿದ್ವಾಂಸರ ಅಭಿಪ್ರಾಯ.
 
ಸಾಹಿತ್ಯಕೃತಿಗಳು :
ಛಂದೋಬಂದಿ ಮತ್ತು ಕರ್ಣಾಟಕ ಕಾದಂಬರಿ ಈತನ ಎರಡು ಗ್ರಂಥ.
ಛಂದೋಬಂದಿ ಕನ್ನಡದ ಮೊದಲ ಛಂದೋ ಗ್ರಂಥ ಇದು ಪದ್ಯ ರೂಪದಲ್ಲಿದೆ.
ಛಂದೋಬಂದಿ : ಶಿವನು ಉಮೆಗೆ ಹೇಳಿದ ಶಾಸ್ತ್ರಗ್ರಂಥ ಅದನ್ನು ಪಿಂಗಳನೆಂಬ ಶಾಸ್ತ್ರಕಾರನು ಭೂಲೋಕದಲ್ಲಿ ಪ್ರಚಾರಮಾಡಿದನು ದೇವಭಾಷೆಯಲ್ಲಿ ಅವನು ಬರೆದ ಛಂದೋಂಬುರಾಶಿಯನ್ನು ನಾಕಿಗನು ತನ್ನ ಧರ್ಮಪತ್ನಿಗೆ ಹೇಳಿದನಂತೆ.
ಈ ಗ್ರಂಥದಲ್ಲಿ ಆರು ಪರಿಚ್ಛೇದಗಳಿವೆ ಅವುಗಳಿಗೆ 'ಅಧಿಕಾರ' ವೆಂದು ನಾಗವರ್ಮನು ಹೆಸರು ಕೊಟ್ಟಿದ್ದಾನೆ. ಮೊದಲನೆಯದು ಸಂಜ್ಞಾಧಿಕಾರ ಇದರಲ್ಲಿ ಗಣ, ಪ್ರಾಸಗಳ ಲಕ್ಷಣಗಳನ್ನು ಹೇಳಿ ಜಾತಿ ಛಂದಸ್ಸಿನ ವಿವರಗಳನ್ನು ಕೊಟ್ಟಿದ್ದಾನೆ. ಮದನವತಿ, ಅಕ್ಕರ, ಚೌಪದಿ, ಗೀತಿಕೆ, ಏಳೆ, ತಿವದಿ, ಷಟ್ಪದಿ ಎಂಬ ಪದ್ಯಭೇದಗಳನ್ನು ಹೇಳಿ ಅವುಗಳ ಲಕ್ಷಣಗಳನ್ನು ವಿವರಿಸಿದ್ದಾನೆ.
ಎರಡನೆಯ ಅಧಿಕಾರದಲ್ಲಿ ಸಮವೃತ್ತಗಳ ಲಕ್ಷಣಗಳ ವಿವರಣೆಯಿದೆ. ಉಕ್ತಿ ಛಂದಸ್ಸಿನಿಂದ ಹಿಡಿದು ಉತ್ಕೃತಿಯವರೆಗೆ ಒಟ್ಟು ಇಪ್ಪತ್ತಾರು ಛಂದಸ್ಸುಗಳನ್ನು ಹೇಳಿ ಅವುಗಳ ಲಕ್ಷಣಗಳನ್ನು ವಿವರಿಸಿದ್ದಾನೆ ಮೂರನೆಯ ಅಧಿಕಾರದಲ್ಲಿ ಮಾಲಾವೃತ್ತ, ಅರ್ಧಸಮವೃತ್ತಗಳು, ವಿಷಮವೃತ್ತ ಮೊದಲಾದವುಗಳನ್ನು ಉದಾಹರಣೆ ಮೂಲಕ ವಿವರಿಸಿದ್ದಾನೆ. ನಾಲ್ಕು ಮತ್ತು ಐದನೆ ಅಧಿಕಾರಗಳಲ್ಲಿ ಕನ್ನಡ ಪದ್ಯ ಜಾತಿಯ ಲಕ್ಷಣಗಳನ್ನೂ ಕಂದಪದ್ಯವನ್ನೂ ವಿವರಿಸಲಾಗಿದೆ. ಆರನೆಯ ಅಧಿಕಾರದಲ್ಲಿ ಛಂದಶಾಸ್ತ್ರಕ್ಕೆ ಸಂಬಂಧಿಸಿದ ಷಟ್ಪ್ರತ್ಯಗಳನ್ನು ಹೇಳಿದ್ದಾನೆ.
ಕರ್ಣಾಟಕ ಕಾದಂಬರಿ:ಬಾಣಭಟ್ಟನ ಲೋಕಪ್ರಸಿದ್ಧವಾದ 'ಕಾದಂಬರಿ' ಸಂಸ್ಕೃತ ಗದ್ಯಕಾವ್ಯವನ್ನು ಮೂಲಕ್ಕೆ ಲೋಪಬಾರದ ಹಾಗೆ ಅನುವಾದ ಮಾಡಿದ್ದಾನೆ.
 
ಪ್ರಶಸ್ತಿ, ಪುರಸ್ಕಾರ, ಬಿರುದು:
ಕವಿರಾಜಹಂಸ, ವಿಬುಧಮನಃಪದ್ಮಿನೀರಾಜಹಂಸ, ಭೂಮಿಕಂದರ್ಪ ಈತನ ಬಿರುದುಗಳು.
ಕವಿ ಅಲ್ಲದೆ ಯುದ್ಧ ಪ್ರವೀಣತೆಯನ್ನು ಪಡೆದಿದ್ದನು, ಧಾರಾನಗರದ ಭೋಜರಾಜನಿಂದ ಜಾತ್ಯಾಶ್ವಗಳ ಪಾರಿತೋಷಕವನ್ನು ಪಡೆದು ಕೊಂಡಿದ್ದನು.
 
ಕವಿ ಕುರಿತು ಪ್ರಕಟಿತ ಪ್ರಮುಖ ಲೇಖನಗಳು :
 
ಕವಿ ಸಂದೇಶ :