ನಂಜುಂಡ(ಕ್ರಿ.ಶ.೧೫೨೫)
 
ಸ್ವ-ವಿವರ
ಕ್ರಿ.ಶ. ೧೫೦೮ರಲ್ಲಿದ್ದ ಮೂರನೆಯ ಮಂಗರಸನ ಮಗ.
ಮಂಗರಸ ಜೈನ, ನಂಜುಂಡ ವೀರಶೈವ ಮತವನ್ನು ಅಂಗೀಕರಸಿದ.
ಕಾಳೀದಾಸ, ಬಾಣ, ಪಂಪ, ನೇಮಿಚಂದ್ರ, ಜನ್ನ, ಗುಣನಂದಿ, ಗಜಗ, ಗುಣವರ್ಮ, ನಾಗಚಂದ್ರ, ಸುಜನೋತ್ತಂಸ, ಅಸಗ, ರನ್ನ, ಶಾಂತಿವರ್ಮ ಮುಂತಾದ ಪೂರ್ವಕವಿಗಳನ್ನು ತನ್ನ ಕಾವ್ಯದಲ್ಲಿ ಹೊಗಳಿದ್ದಾನೆ.
ಕುಮಾರರಾಮನ ಕಥೆ ಇವನ ಮಹಾನ್ ಸಾಂಗತ್ಯ ಕಾವ್ಯ.
ಕುಮಾರರಾಮ ಕಂಪಪ್ರದೇಶದ ರಾಜನ ಮಗ ಕುಮಾರರಾಮನ ಚರಿತ್ರೆ. ಇದರಲ್ಲಿ ಐದು ಸಾವಿರಕ್ಕೂ ಅಧಿಕ ಸಂಖ್ಯೆಯ ಪದ್ಯಗಳಿವೆ.
ಕಥಾನಾಯಕ ರಾಮನಾಥನನ್ನು ಅವನ ಮಲತಾಯಿ ಮೋಹಿಸಿ, ನಂತರ ಅವನಿಂದ ತಿರಸ್ಕಾರಕ್ಕೆ ಒಳಗಾಗುತ್ತಾಳೆ. ಕುಪಿತಳಾಗಿ ತನ್ನ ಪತಿಗೆ ದೂರನ್ನಿತ್ತು ಅವನನ್ನು ಕೊಲ್ಲಲು ಪ್ರೇರೇಪಿಸುತ್ತಾಳೆ. ರಾಜನ ಆದೇಶವನ್ನು ಪಾಲಿಸದೆ ಮಂತ್ರಿ ಕುಮಾರರಾಮನನ್ನು ಬಚ್ಚಿಡುತ್ತಾನೆ. ಇದೇ ಸಮಯಕ್ಕೆ ರಾಜ್ಯಕ್ಕೆ ಮುಸ್ಲಿಮರು ಧಾಳಿ ಮಾಡುತ್ತಾರೆ. ವಿಷಯ ತಿಳಿದ ಕುಮಾರರಾಮ ಶತ್ರುಗಳ ಧಾಳಿಯನ್ನು ಸಮರ್ಥವಾಗಿ ಎದುರಿಸಿ ಯುದ್ಧದಲ್ಲಿ ಹತನಾಗುತ್ತಾನೆ. ಇದು ಸಾರಾಂಶ.