ರಾಜಾದಿತ್ಯ
 
ಸ್ವ-ವಿವರ
ರಾಜಾದಿತ್ಯನು ತನಕ್ಕಿಂತ ಮುಂಚಿನ ಯಾವ ಕನ್ನಡ ಕವಿಯ ಹೆಸರನ್ನೂ ಹೇಳಿಲ್ಲವಾದ್ದರಿಂದ ಇವನ ಕಾಲವಿಚಾರದಲ್ಲಿ ಸ್ವಲ್ಪ ತೊಡಕು ಬಂದಿತ್ತು.
ಭಿಲ್ಲಮನು ಪರಾಜಯಗಳ ಸುದ್ದಿ ಹೇಳುವ ಪದ್ಯಗಳು ಗೋಚರಿಸಿದ್ದರಿಂದ ಆ ತೊಡಕು ನಿವಾರಣೆಯಾಯಿತು.
ಈ ಜೈನಕವಿ ಹೂವಿನ ಬಾಗೆಯೆಂಬ ಗ್ರಾಮದವನು. ಆ ಗ್ರಾಮ ಕೂಡಿಮಂಡಲಕ್ಕೆ ಅನುಪಮವಾದ ರತ್ನ ಮಂಡನದಂತೆ ಇದ್ದಿತೆಂದು ಕವಿ ಹೆಮ್ಮೆಯಿಂದ ಹೊಗಳಿಕೊಂಡಿದ್ದಾನೆ.
ಈತನ ಒಂದು ಕೃತಿಯಲ್ಲಿ ಸೇವುಣ ರಾಜನಾದ ಭಿಲ್ಲಮನನ್ನು ಹೊಗಳಿದ ಪದ್ಯಗಳಿರುವುದರಿಂದ ಇವನು ಸುಮಾರು ೧೧೯೦ರಲ್ಲಿ ಇದ್ದಿರಬೇಕೆಂದು ಚರಿತ್ರಕಾರರು ತರ್ಕಿಸಿದ್ದಾರೆ.
 
ವಿದ್ಯಾಭ್ಯಾಸ :
 
ವೃತ್ತಿ:
 
ಸಾಹಿತ್ಯಕೃತಿಗಳು :
ಕನ್ನಡದ ಮೊದಲ ಗಣಿತ ಶಾಸ್ತ್ರ ರಚಸಿದವನು ರಾಜಾದಿತ್ಯ.
`ಕ್ಷೇತ್ರಗಣಿತ', `ವ್ಯವಹಾರಗಣಿತ', `ಲೀಲಾವತಿ', `ಜೈನಗಣಿತ ಸೂತ್ರ' ಮೊದಲಾದ ಆರು ಗಣಿತ ಗ್ರಂಥಗಳನ್ನು ಇವನು ರಚಿಸಿರುವನೆಂದು ತಿಳಿಯಬಂದಿದೆ.
ಈತನ ಕೃತಿಗಳಲ್ಲಿ `ಚಿತ್ರಹಸುಗೆ' ಎಂಬುದು ಟೀಕೆಯ ರೂಪದಲ್ಲಿದೆ. ಉಳಿದುವೆಲ್ಲ ಗದ್ಯಪದ್ಯಾತ್ಮಕವಾಗಿದೆ.
ಆ ಕಾಲದ ವಿದ್ವಾಂಸರು ಸಾಹಿತ್ಯಾಭ್ಯಾಸಕ್ಕೆ ಉಪಯುಕ್ತವಾದ ವ್ಯಾಕರಣ, ಛಂದಸ್ಸು, ಅಲಂಕಾರ ಶಾಸ್ತ್ರಗಳನ್ನೇ ಅಲ್ಲದೇ ಕ್ಲಿಷ್ಟವಾದ ಗಣಿತಶಾಸ್ತ್ರವನ್ನೂ ಪದ್ಯದಲ್ಲಿ ಹೇಳಬಲ್ಲವಾರಾಗಿದ್ದರೆಂಬುದು ಇಲ್ಲಿ ಗಮನಿಸಬೇಕಾದ ವಿಚಾರ.
ಇದರಿಂದ ಅಂದಿನ ಜನಕ್ಕೆ ಪದ್ಯವೇ ಹೆಚ್ಚು ಹೃದ್ಯವಾಗಿದ್ದಿತೆಂದು ತಿಳಿಯುತ್ತದೆ.
 
ಪ್ರಶಸ್ತಿ, ಪುರಸ್ಕಾರ, ಬಿರುದು:
ಈತನಿಗೆ ಗಣಿತ ವಿಳಾಸ, ಓಜೆವೆಂಡಗ, ಪದ್ಯವಿದ್ಯಾಧರ, ಗಣಿತವಿರಿಂಚಿ ಎಂಬ ಬಿರುದುಗಳು ಇದ್ದವು.
 
ಕವಿ ಕುರಿತು ಪ್ರಕಟಿತ ಪ್ರಮುಖ ಲೇಖನಗಳು :
 
ಕವಿ ಸಂದೇಶ :