ರತ್ನಾಕರವರ್ಣಿ
 
ಸ್ವ-ವಿವರ
 
ಕಾವ್ಯನಾಮ : ನಿರಂಜನಸಿದ್ಧ ಇವನ ಅಂಕಿತನಾಮ.
ನಿಜನಾಮ/ಪೂರ್ಣನಾಮ : ರತ್ನಾಕರವರ್ಣಿ,ರತ್ನಾಕರಸಿದ್ಧ, ರತ್ನಾಕರ ಅಣ್ಣಗಳು ಇವನ ಇನ್ನಿತರ ಹೆಸರುಗಳು
ಕಾಲ : ಇವನ ಕಾಲ ಸುಮಾರು ಕ್ರಿ.ಶ.೧೫೫೭.
ತಂದೆ :  
ತಾಯಿ:  
ಜನ್ಮ ಸ್ಥಳ : ವೇಣುಪುರ ಅಥವಾ ಮೂಡುಬಿದರೆ ಇತನ ಊರು.
ಮನೆ,ಮನೆತನ : ಹುಟ್ಟಿನಿಂದ ಕ್ಷತ್ರಿಯ, ನಂತರ ಜೈನಮತಕ್ಕೆ ಚಾರುಕೀರ್ತಿಗಳಿಂದ ದೀಕ್ಷೆ.
ಪತ್ನಿ :  
ಮಕ್ಕಳು :  
 
ಸಾಹಿತ್ಯಕೃತಿಗಳು :
ಭರತೇಶವೈಭವ ಇವನ ಮಹಾಗ್ರಂಥ
ತ್ರಿಲೋಕಶತಕ, ಅಪರಜಿತೇಶ್ವರಶತಕ ಇವನ ಇನ್ನಿತರ ರಚನೆಗಳು
ಸಾಂಗತ್ಯಕಾವ್ಯ ರಚನೆಯಲ್ಲಿ ಪ್ರಸಿದ್ಧನು.
ಭರತೇಶ್ವರವೈಭವ-ಇದರಲ್ಲಿ ಹತ್ತು ಸಾವಿರದಷ್ಟು ಪದ್ಯಗಳಿವೆ. ಇದು ಪ್ರಥಮ ತೀರ್ಥಂಕರನಾದ ಪುರು ಪರಮೇಶ್ವರನ ಮಗ ಭರತನು ಹೇಗೆ ಸುಖಜೀವನದಲ್ಲಿ ತೇಲಾಡಿ ನಂತರ ವಿರಕ್ತನಾಗಿ ಜಿನಯೋಗಿಯಾಗುವನೆಂಬ ಕಥೆ.