ಷಡಕ್ಷರದೇವ (ಕ್ರಿ.ಶ. ೧೬೫೫)
 
ಸ್ವ-ವಿವರ
 
ಮಳವಳ್ಳಿ ತಾಲೂಕಿನ ದನುಗೂರು ಇವನ ಜನ್ಮಸ್ಥಳ.
ಯಳಂದೂರಿನ ಮಠಕ್ಕೆ ಸ್ವಾಮೀಜಿಯಾಗಿ ಅಲ್ಲಿಯೇ ಸಮಾಧಿ ಹೊಂದಿದ.
ಉಭಯಕವಿತಾವಿಶಾರದ, ರಾಜಶೇಖರವಿಲಾಸ, ವೃಷಭೇಂದ್ರವಿಜಯ, ಶಬರ ಶಂಕರವಿಲಾಸ, ವೀರಭದ್ರ ದಂಡಕ ಇವನ ಕೃತಿಗಳು.
ಕವಿಕರ್ಣರಸಾಯನ ಇವನ ಸಂಸ್ಕೃತಕಾವ್ಯ.
ರಾಜಶೇಖರವಿಲಾಸ- ಚಂಪೂಕಾವ್ಯ. ಸತ್ಯೇಂದ್ರ ಚೋಳನ ಮಗನಾದ ರಾಜಶೇಖರ ವಿಹಾರಾರ್ಥಿಯಾಗಿ ಹೊರಗೆ ಹೊರಟಾಗ ತಿರುಕೊಳವಿನಾಚಿ ಎಂಬ ಶಿವಭಕ್ತಳ ಚಿಕ್ಕಮಗ ರಾಜಪುತ್ರನ ಕುದುರೆಯ ಕಾಲಿಗೆ ಸಿಕ್ಕು ಸಾವನ್ನಪ್ಪುತ್ತಾನೆ. ಆಕೆ ದೊರೆಗೆ ದೂರು ಕೊಡಲು ಅವನು ತನ್ನ ಮಗನನ್ನು ಮರಣದಂಡನೆಗೆ ಗುರಿಮಾಡಿದ. ತಾನೂ ಪುತ್ರಶೋಕದಿಂದ ಸತ್ತ ರಾಜಪುತ್ರನನ್ನು ಕೊಲ್ಲಲು ಮನಸ್ಸು ಒಪ್ಪದೆ ಮಂತ್ರಿ ಮೊದಲಾದವರು ಸತ್ತರು. ಕೊನೆಗೆ ಶಿವ ಪ್ರಸನ್ನನಾಗಿ ಎಲ್ಲರನ್ನೂ ಬದುಕಿಸಿದ. ಆಮೇಲೆ ಎಲ್ಲರಿಗೂ ಮುಕ್ತಿಯನ್ನು ಕೊಟ್ಟ.
ವೃಷಭೇಂದ್ರ ವಿಜಯ-ವಿಸ್ತಾರವಾದ ಚಂಪೂಕಾವ್ಯ. ಪಾಲ್ಕುರಿಕೆ ಸೋಮನಾಥನು ತೆಲುಗಿನಲ್ಲಿ, ಭೀಮಕವಿ ಕನ್ನಡದಲ್ಲಿ ಹಾಗೂ ಶಂಕರಕವಿ ಸಂಸ್ಕೃತದಲ್ಲಿಯೂ ರಚಿಸಿದ ಬಸವಣ್ಣನ ಕಥೆಯೇ ಚಂಪೂ ಶೈಲಿಯಲ್ಲಿ ಮೂಡಿದೆ.
ಶಬರಶಂಕರವಿಲಾಸ-ಶಿವ ಶಬರನಾದ ಲೀಲೆಯ ಕಥೆಯಿದೆ.