ಗಿರೀಶ ಕಾರ್ನಾಡ್
ಸ್ವ-ವಿವರ
 
ಕಾವ್ಯನಾಮ :  
ನಿಜನಾಮ/ಪೂರ್ಣನಾಮ : ಗಿರೀಶ ರಘುನಾಥ ಕಾರ್ನಾಡ.
ಜನನ : ೧೯೩೮ ಮೇ ೧೯.
ತಂದೆ : ರಘುನಾಥ ಕಾರ್ನಾಡ.
ತಾಯಿ: ಕೃಷ್ಣಾಬಾಯಿ.
ಜನ್ಮ ಸ್ಥಳ : ಮಥೇರಾನ್, ಮಹಾರಾಷ್ಟ್ರ
ಮನೆ,ಮನೆತನ :  
ಪತ್ನಿ : ಡಾ. ಸರಸ್ವತಿ ಗಣಪತಿ.
ವಿವಾಹವಾದ ದಿನ : ೧೯೮೦.
ಮಕ್ಕಳು :  
 
ವಿದ್ಯಾಭ್ಯಾಸ :
ಪ್ರಾಥಮಿಕ :  
ಪ್ರೌಢಶಾಲೆ :  
ಕಾಲೇಜು: ೧೯೫೮ರಲ್ಲಿ ಬಿ.ಎ-ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಪ್ರಥಮ ಸ್ಥಾನ.
ಪದವಿ: ಮುಂಬಯಿ ವಿವಿಯಲ್ಲಿ ಸ್ಟ್ಯಾಟಿಸ್ಟಿಕ್‌ನಲ್ಲಿ ಎಮ್.ಎಗಾಗಿ ದಾಖಲಾಗಿ 'ದಕ್ಷಿಣಫೆಲೊ' ಎಂಬ ಮನ್ನಣೆ ಗಳಿಸಿದರು.
ನಂತರ ಆಕ್ಸ್ ಫರ್ಡ್ ನ ಪ್ರತಿಷ್ಠಿತ ರೋಡ್ಸ್‌ವಿದ್ಯಾರ್ಥಿ ವೇತನ ದೊರೆತು ಆಕ್ಸ್‌ಫರ್ಡ್‌ಗೆ ತೆರಳಿದರು.
ತತ್ವಶಾಸ್ತ್ರ, ರಾಜ್ಯಶಾಸ್ತ್ರ ಮತ್ತು ಅರ್ಥಶಾಸ್ತ್ರದಲ್ಲಿ ಎಂ.ಎ ಪದವಿ ಯನ್ನು ೧೯೬೩ರಲ್ಲಿ ಗಳಿಸಿದರು.
೧೯೬೨-೬೩ ರಲ್ಲಿ ಮ್ಯಾಗ್ಡಲೆನ್ ಜೂನಿಯರ್ ಕಾಮನ್ ರೂಮ್ ಹಾಗೂ ಆಕ್ಸ್ ಫರ್ಡ್ ಯೂನಿಯನ್ ಸೊಸೈಟಿಯ ಅಧ್ಯಕ್ಷರಾಗಿದ್ದರು.
 
ವೃತ್ತಿ:
೧೯೬೩ ಸಹಾಯಕ ವ್ಯವಸ್ಥಾಪಕರಾಗಿ, ಆನಂತರ ವ್ಯವಸ್ಥಾಪಕರಾಗಿ ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್(ಮದ್ರಾಸ್)ನಲ್ಲಿ ಸೇವೆ.
೧೯೭೪-೭೫ರಲ್ಲಿ ಪುಣೆಯ ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್‌ಟಿಟ್ಯೂಟ್‌ನ ನಿರ್ದೇಶಕ ವೃತ್ತಿ.
೧೯೭೬-೭೮ರಲ್ಲಿ ಕರ್ನಾಟಕ ನಾಟಕ ಅಕಾಡೆಮಿಯ ಆಧ್ಯಕ್ಷರಾದರು.
೧೯೮೭-೮೮ ರಲ್ಲಿ ಚಿಕಾಗೋ ವಿವಿಯಲ್ಲಿ ಸಂದರ್ಶಕ ಪ್ರಾಧ್ಯಾಪಕ ಮತ್ತು ಫುಲ್‌ಬ್ರೈಟ್ ಸ್ಥಾನೀಯ ವಿದ್ವಾಂಸರಾಗಿ ದುಡಿದರು.
೧೯೮೮-೯೩ ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಅಧ್ಯಕ್ಷತೆ.
 
ಸಾಹಿತ್ಯಕೃತಿಗಳು :
ನಾಟಕಗಳು : ೧೯೬೧: ಯಯಾತಿ.
೧೯೬೪: ತುಘಲಕ್.
೧೯೭೧: ಹಯವದನ.
೧೯೭೭: ಅಂಜುಮಲ್ಲಿಗೆ.
೧೯೮೦: ಹಿಟ್ಟಿನ ಹುಂಜ.
೧೯೮೮: ನಾಗಮಂಡಲ.
೧೯೯೦: ತಲೆದಂಡ.
೧೯೯೫: ಅಗ್ನಿ ಮತ್ತು ಮಳೆ.
೨೦೦೦: ಟಿಪ್ಪೂ ಸುಲ್ತಾನ ಕಂಡ ಕನಸು
ಅನುವಾದಿತ ಕೃತಿಗಳು : ತುಘಲಕ್(೧೯೭೨), ಹಯವದನ(೧೯೭೫), ನಾಗಮಂಡಲ(೧೯೯೦), ತಲೆದಂಡ(೧೯೯೩) ಮತ್ತು ಅಗ್ನಿ ಮತ್ತು ಮಳೆ(೧೯೯೮) ರಲ್ಲಿ ಇಂಗ್ಲೀಷ್ ಭಾಷೆಗೆ ಅನುವಾದಗೊಂಡಿದೆ.
ತುಘಲಕ್ ಹಂಗೇರಿಯನ್ ಮತ್ತು ಜರ್ಮನ್ ಭಾಷೆಗಳಿಗೂ (೧೯೭೬ ಮತ್ತು ೧೯೮೯ ರಲ್ಲಿ) ಅನುವಾದವಾಗಿದೆ.
ಟಿಪ್ಪೂ ಸುಲ್ತಾನ ಕಂಡ ಕನಸು ಬಿಬಿಸಿ (ಬ್ರಿಟಿಷ್ ಬ್ರಾಡ್ ಕಾಸ್ಟಿಂಗ್ ಕಾರ್ಪೊರೇಷನ್) ಗಾಗಿ ಇಂಗ್ಲೀಷ್ ರೂಪದಲ್ಲಿ ಸಿದ್ಧವಾಗಿದೆ.
ಬಾದಲ್ ಸರ್ಕಾರ್ ಅವರ 'ಏವಂ ಇಂದ್ರಜಿತ್' ನಾಟಕವನ್ನು ಇವರು ಇಂಗ್ಲೀಷ್ ಭಾಷೆಗೆ ಅಳವಡಿಸಿದ್ದಾರೆ.
ವಿಮರ್ಶಾ ಗ್ರಂಥಗಳು : ಮಾಸ್ತಿ ಅವರ 'ಕಾಕನಕೋಟೆ' ಮತ್ತು ಆದ್ಯ ರಂಗಾಚಾರ್ಯರ 'ಹರಿಜನ್ವಾರ' ನಾಟಕದ ಬಗ್ಗೆ ವಿಮರ್ಶೆ ಬರೆದಿದ್ದಾರೆ.
ಜೀವನ ಚರಿತ್ರೆ :  
ಪ್ರಬಂಧ :  
ಸಂಪಾದಿತಕೃತಿಗಳು :  
ಚಲನ ಚಿತ್ರ ಮತ್ತು ಕಾರ್ನಾಡರು:
ಡಾ.ಯು.ಆರ್. ಅನಂತಮೂರ್ತಿ ಅವರ ಕಾದಂಬರಿ ಆಧಾರಿಸಿದ 'ಸಂಸ್ಕಾರ' ಚಿತ್ರದಲ್ಲಿನ ಮುಖ್ಯಪಾತ್ರವಾದ ಪ್ರಾಣೇಶಾಚಾರ್ಯನಾಗಿ ಕಾರ್ನಾಡರು ಅಭಿನಯಿಸಿದರು. ಈ ಮೂಲಕ ಸಿನಿಮಾ ಜಗತ್ತಿಗೆ ಪರಿಚಿತರಾದರು.
ರಾಷ್ಟ್ರಪತಿಗಳ ಸ್ವರ್ಣಪದಕ(೧೯೭೦)ಪ್ರಶಸ್ತಿ ಗಳಿಸಿದ ಸಂಸ್ಕಾರ ಚಿತ್ರಕ್ಕೆ ಚಿತ್ರಕಥೆ-ಸಂಭಾಷಣೆಯನ್ನೂ ಕಾರ್ನಾಡರೇ ರಚಿಸಿದರು.
ಎಸ್.ಎಲ್. ಭೈರಪ್ಪನವರ ಕಾದಂಬರಿ 'ವಂಶವೃಕ್ಷ' ವನ್ನು ತೆರೆಗೆ ಅಳವಡಿಸಿದರು. ಆ ಮೂಲಕ ನಿರ್ದೇಶಕರಾದರು. ಬಿ.ವಿ. ಕಾರಂತರೊಡಗೂಡಿ ನಿರ್ದೇಶಿಸಿದ ಈ ಚಿತ್ರದಲ್ಲಿ ಅಭಿನಯಿಸಿ, ಚಿತ್ರಕಥೆ-ಸಂಭಾಷಣೆಯನ್ನು ಬರೆದರು.
ಉತ್ತಮ ನಿರ್ದೇಶನಕ್ಕಾಗಿ ರಾಷ್ಟ್ರಪ್ರಶಸ್ತಿಯನ್ನು, ರಾಜ್ಯ ಪ್ರಶಸ್ತಿ ಹಾಗೂ ವರ್ಷದ ಅತ್ಯುತ್ತಮ ಕನ್ನಡ ಚಿತ್ರಪ್ರಶಸ್ತಿಯನ್ನು ಪಡೆದರು.
ನಂತರ ಎಸ್.ಎಲ್. ಭೈರಪ್ಪನವರ 'ತಬ್ಬಲಿಯು ನೀನಾದೆ ಮಗನೆ' ಕೃತಿಯನ್ನು ತೆರೆಗೆ ಅಳವಡಿಸಿ ಜನಮನ್ನಣೆ ಗಳಿಸಿದರು.
ಇವರ ಚಲನಚಿತ್ರಗಳು ಹಲವು ಹೊಸನಟರನ್ನು ಚಲನಚಿತ್ರ ರಂಗಕ್ಕೆ ನೀಡಿದೆ. ವಂಶವೃಕ್ಷದ ಮೂಲಕ ವಿಷ್ಣುವರ್ಧನ್, ತಬ್ಬಲಿಯು ನೀನಾದೆ ಮಗನೆಯಲ್ಲಿ ನಾಸಿರುದ್ದೀನ್ ಷಾ, ಒಂದಾನೊಂದು ಕಾಲದಲ್ಲಿ ಮೂಲಕ ಶಂಕರ್ ನಾಗ್ ಪಾದರ್ಪಣೆ ಮಾಡಿದರು.
ಹಿಂದಿಯಲ್ಲಿ 'ಗೋಧೂಳಿ' ಚಿತ್ರಕ್ಕಾಗಿ ಅತ್ಯುತ್ತಮ ಚಲನಚಿತ್ರ ಎಂದು ಫಿಲ್ಮ್ ಫೇರ್ ಪ್ರಶಸ್ತಿ ಬಿವಿಕಾರಂತ-ಕಾರ್ನಾಡರಿಗೆ ಲಭಿಸಿತು.
ಕಾರ್ನಾಡರೇ ಚಿತ್ರಕಥೆ ಬರೆದು ನಿರ್ದೇಶಿಸಿದ ಆಲನಹಳ್ಳಿ ಶ್ರೀಕೃಷ್ಣ ಅವರ ಕಾದಂಬರಿ ಆಧರಿಸಿದ 'ಕಾಡು' ಹಾಗೂ ತಾವೇ ರಚಿಸಿದ 'ಒಂದಾನೊಂದು ಕಾಲದಲ್ಲಿ' ಚಿತ್ರ ಗೌರವ ತಂದು ಕೊಟ್ಟವು. ೧೯೭೮ ರಲ್ಲಿ ಅತ್ಯುತ್ತಮ ಕನ್ನಡ ಚಲನಚಿತ್ರ ಎಂದು ರಾಷ್ಟ್ರಪ್ರಶಸ್ತಿ.
೧೯೭೪ರಲ್ಲಿ ದ್ವಿತೀಯ ಅತ್ಯುತ್ತಮ ಚಲನಚಿತ್ರ ಎಂದು ರಾಷ್ಟ್ರ ಪ್ರಶಸ್ತಿಗಳ ರಜತ ಪದಕ 'ಕಾಡು' ಚಿತ್ರಕ್ಕೆ ಸಂದಿದೆ.
೧೯೯೧ರಲ್ಲಿ 'ಸಂತ ಶಿಶುನಾಳ ಶರೀಫ' ಚಿತ್ರದ ಅಭಿನಯಕ್ಕಾಗಿ ಕರ್ನಾಟಕದ ರಾಜ್ಯ ಸರ್ಕಾರ ನೀಡುವ ಆತ್ಯುತ್ತಮ ಪೋಷಕ ನಟ ಪ್ರಶಸ್ತಿ ಪಡೆದರು.
ಕನ್ನಡದ ಹಿರಿಯ ಕವಿ ದ.ರಾ.ಬೇಂದ್ರೆ ಅವರ ಬಗ್ಗೆ ಕನ್ನಡದಲ್ಲಿ ಒಂದು ಸಾಕ್ಷ್ಯಚಿತ್ರವನ್ನು ನಿರ್ಮಿಸಿದ್ದಾರೆ.
ಹಿಂದಿಯ 'ಉತ್ಸವ್' ಮತ್ತು 'ಚೆಲುವಿ' ಚಿತ್ರಗಳ ಚಿತ್ರಕಥೆ-ನಿರ್ದೇಶನಗಳೂ ಕಾರ್ನಾಡರವೇ. ಪರಿಸರ ಸಂರಕ್ಷಣೆಯನ್ನು ಪ್ರತಿಪಾದಿಸುವ ಅತ್ಯುತ್ತಮ ಚಲನಚಿತ್ರವೆಂದು 'ಚೆಲುವಿ' ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ(೧೯೯೩) ಬಂದಿತು.
೧೯೭೮ ರಲ್ಲಿ 'ಭೂಮಿಕಾ' ಚಿತ್ರದ ಚಿತ್ರಕಥೆಗಾಗಿ ಶ್ಯಾಮ್ ಬೆನಗಲ್ ಹಾಗೂ ಸತ್ಯದೇವ ದುಬೆ ಅವರೊಡನೆ ರಾಷ್ಟ್ರಪ್ರಶಸ್ತಿಯನ್ನು ಹಂಚಿಕೊಡರು.
ಕನಕದಾಸ ಮತ್ತು ಪುರಂದರದಾಸರ ಜೀವನ ಸಾಧನೆಗಳನ್ನಾಧರಿಸಿದ 'ಕನಕ-ಪುರಂದರ' ಕಾರ್ನಾಡರ ಇಂಗ್ಲೀಷ್ ಸಾಕ್ಷ್ಯಚಿತ್ರ ೧೯೮೯ ರಲ್ಲಿ ಅತ್ಯುತ್ತಮ non featured film ಎಂದುದಕ್ಕಾಗಿ 'ಸ್ವರ್ಣಕಮಲ'ವನ್ನು ಗಳಿಸಿತು.
ಕಾರ್ನಾಡರು ಆಂಗ್ಲ ಭಾಷೆಯಲ್ಲಿ ನಿರ್ಮಿಸಿದ ಇನ್ನೊಂದು ಸಾಕ್ಷ್ಯಚಿತ್ರ ‘The Lamp in the Nishe.Part1:Sufism in India’ ಹಾಗೂ' part2: Sufism and Bhakti ' ಹೀಗೆ ಎರಡು ಭಾಗದಲ್ಲಿ ರಚಿಸಿರುವ ಈ ಸಾಕ್ಷ್ಯಚಿತ್ರ Best Non-feature Film On Social Issues s ಎಂದು ಗುರುತಿಸಲ್ಪಟ್ಟು ರಾಷ್ಟಪ್ರಶಸ್ತಿ ಗಳಿಸಿತು.
ರಂಗಭೂಮಿ, ಚಲನಚಿತ್ರ ಕ್ಷೇತ್ರದಂತೆ ಕಿರುತೆರೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. 'ವೋ ಘರ್' ಎನ್ನುವ ಚಿತ್ರವನ್ನು ನಿರ್ದೇಶಿಸಿದ್ದಾರೆ.
ಮೃಣಾಲ್ ಸೇನ್, ಸತ್ಯಜಿತ್ ರೇ, ಶ್ಯಾಮ್ ಬೆನೆಗಲ್ ಮುಂತಾದ ಪ್ರತಿಭಾವಂತ ನಿರ್ದೇಶಕರ ನಿರ್ದೇಶನದಲ್ಲಿ ಹಲವಾರು ಚಲನಚಿತ್ರಗಳಲ್ಲಿ, ಧಾರವಾಹಿಗಳಲ್ಲಿ ಅಭಿನಯಿಸಿದ್ದಾರೆ.
೧೯೭೭ ರಲ್ಲಿ ನವದೆಹಲಿಯಲ್ಲಿ ನಡೆದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಮೌಲ್ಯ ನಿರ್ಣಾಯಕರಲ್ಲಿ ಒಬ್ಬರಾಗಿದ್ದರು.
ಲಂಡನ್ನಿನಲ್ಲಿ ನಡೆದ ಭಾರತ ಉತ್ಸವ(ಫೆಸ್ಟಿವಲ್ ಆಫ್ ಇಂಡಿಯಾ, ೧೯೮೨) ಹಾಗೂ ಮಾಂಟ್ರಿಯಲ್ ಚಲನಚಿತ್ರೋತ್ಸವಗಳಲ್ಲಿ ಭಾರತದ ಅಧಿಕೃತ ಪ್ರತಿನಿಧಿಯಾಗಿ ಭಾಗವಹಿಸಿದರು.
ವಿಜ್ಞಾನ-ತಂತ್ರಜ್ಞಾನದ ಮುನ್ನಡೆಯನ್ನು ಬಿಂಬಿಸುವ, ವಿಜ್ಞಾನಿ ಯಶ್‌ಪಾಲ್ ಮಾರ್ಗದರ್ಶನದ 'ದಿ ಟರ್ನಿಂಗ್ ಪಾಯಿಂಟ್' ಎನ್ನುವ ದೂರದರ್ಶನದ ಧಾರವಾಹಿಯಲ್ಲಿ ಮುಖ್ಯ ನಿರೂಪಕರಾಗಿ ಹೆಚ್ಚಿನ ಜನಪ್ರಿಯತೆಯನ್ನು ಗಳಿಸಿದರು.
ಕುವೆಂಪುರವರ ಕಾದಂಬರಿ ಕಾನೂರು ಸುಬ್ಬಮ್ಮ ಹೆಗ್ಗಡತಿಯನ್ನು ತೆರೆಗೆ ಅಳವಡಿಸಿದರು. ಈ ಚಿತ್ರ ರಾಷ್ಟ್ರ ಪ್ರಶಸ್ತಿಯನ್ನು ಗಳಿಸಿತು.
 
ಪ್ರಶಸ್ತಿ, ಪುರಸ್ಕಾರ, ಬಿರುದು:
೧೯೬೨: ಯಯಾತಿ ನಾಟಕಕ್ಕೆ ರಾಜ್ಯಪ್ರಶಸ್ತಿ.
೧೯೭೦: ರಾಜ್ಯೋತ್ಸವ ಪ್ರಶಸ್ತಿ.
೧೯೭೦-೭೨: ಹೋಮಿಭಾಭಾ ಫೆಲೋಶಿಪ್-ಜನಪದ ರಂಗಭೂಮಿಯಲ್ಲಿನ ಸೃಜನಶೀಲ ಕಾರ್ಯಕ್ಕಾಗಿ.
೧೯೭೨: ನಾಟಕ ರಚನೆಗಾಗಿ ಕೇಂದ್ರ ನಾಟಕ ಅಕಾಡೆಮಿ ಪ್ರಶಸ್ತಿ;ವರ್ಷದ ಅತ್ಯುತ್ತಮ ನಾಟಕಕ್ಕಾಗಿ ಭಾರತೀಯ ನಾಟ್ಯ ಸಂಘದ ಕಮಲಾ ದೇವಿ ಪ್ರಶಸ್ತಿ(ಹಯವದನ ನಾಟಕಕ್ಕಾಗಿ)
೧೯೭೪: ಭಾರತ ಸರ್ಕಾರದಿಂದ'ಪದ್ಮಶ್ರೀ' ಪ್ರಶಸ್ತಿ
೧೯೮೪: ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ.
೧೯೮೯: ಕೊಲ್ಕತ್ತಾದ ನಂದೀಕರ್ ಪ್ರಶಸ್ತಿ
೧೯೯೦: 'ಗ್ರಂಥಲೋಕ' ದ ವರ್ಷದ ಲೇಖಕ ಪ್ರಶಸ್ತಿ.
೧೯೯೨: 'ಪದ್ಮಭೂಷಣ' ಪ್ರಶಸ್ತಿ-ಭಾರತ ಸರ್ಕಾರದಿಂದ;ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ-ಅತ್ಯುತ್ತಮ ನಾಟಕಕ್ಕಾಗಿ(ತಲೆದಂಡ)
ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ-ಅತ್ಯುತ್ತಮ ಸೃಜನಶೀಲ ನಾಟಕಕ್ಕಾಗಿ(ನಾಗಮಂಡಲ).
ದಕ್ಷಿಣ ಭಾರತ ಪುಸ್ತಕ ಮಾರಾಟಗಾರರ ಮತ್ತು ಪ್ರಕಾಶಕರ ಸಂಘದ ಪ್ರಶಸ್ತಿ;ಬಿ.ಎಚ್.ಶ್ರೀಧರ್ ಪ್ರಶಸ್ತಿ.
೧೯೯೩: ತಲೆದಂಡ ನಾಟಕಕ್ಕಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ
೧೯೯೪:ಕರ್ನಾಟಕ ಸಾಹಿತ್ಯ ಅಕಾಡೆಮಿ ವಿಶೇಷ ಪುರಸ್ಕಾರ;ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ-ತಲೆದಂಡಕ್ಕಾಗಿ.
೧೯೯೭: ಗುಬ್ಬಿ ವೀರಣ್ಣ ಪ್ರಶಸ್ತಿ.
೧೯೯೮: ಕಾಳಿದಾಸ್ ಸಮ್ಮಾನ್.
೧೯೯೯: ಭಾರತೀಯ ಜ್ಞಾನಪೀಠ ಪ್ರಶಸ್ತಿ.
 
ಕಾರ್ನಾಡರ ಕುರಿತು ಪ್ರಕಟಿತ ಪ್ರಮುಖ ಲೇಖನಗಳು :
 
ಕವಿ ಸಂದೇಶ :