ಮಾಸ್ತಿ
ಸ್ವ-ವಿವರ
 
ಕಾವ್ಯನಾಮ : ಶ್ರೀನಿವಾಸ.
ನಿಜನಾಮ/ಪೂರ್ಣನಾಮ : ಮಾಸ್ತಿ ವೆಂಕಟೇಶ ಅಯ್ಯಂಗಾರ್.
ಜನನ : ೧೮೯೧ ಜೂನ್ ೬
ಮರಣ : ೧೯೮೬ ಜೂನ್ ೬.
ತಂದೆ :  
ತಾಯಿ:  
ಜನ್ಮ ಸ್ಥಳ : ಮಾಸ್ತಿ,ಕೋಲಾರ ಜಿಲ್ಲೆ.
ಪತ್ನಿ :  
ಮಕ್ಕಳು :  
 
ವಿದ್ಯಾಭ್ಯಾಸ :
ಪ್ರಾಥಮಿಕ : ಶಿವಾರಪಟ್ಟಣ,ಮಳವಳ್ಳಿ,ಕೆಆರ್ ಪೇಟೆ.
ಪ್ರೌಢಶಾಲೆ : ಮೈಸೂರಿನ ವೆಸ್ಲಿಯರ್ ಹೈಸ್ಕೂಲ್.
ಕಾಲೇಜು: ೧೯೧೨ರಲ್ಲಿ ಸೆಂಟ್ರಲ್ ಕಾಲೇಜಿನಿಂದಬಿ.ಎ
ಪದವಿ: ಎಂ.ಸಿ.ಎಸ್. ಪರೀಕ್ಷೇಯಲ್ಲಿ ಉತ್ತಮ ದರ್ಜೆಯಲ್ಲಿ ತೇರ್ಗಡೆ.
ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಆಂಗ್ಲ ಸಾಹಿತ್ಯ ಓದಿ ಎಂ.ಎ.ಪದವಿ
 
ವೃತ್ತಿ:
೧೯೪೧ರಲ್ಲಿ ಮೈಸೂರು ಸರ್ಕಾರದಲ್ಲಿ ಕೆಲಸಕ್ಕೆ ಸೇರಿ ವಿವಿಧ ಇಲಾಖೆಯಲ್ಲಿ ಹಲವು ಉನ್ನತಹುದ್ದೆಗಳನ್ನು ಅಲಂಕರಿಸಿದರು.
೧೯೪೪ರಲ್ಲಿ exercise commissioner ರಾಗಿದ್ದಾಗ ಸ್ವ ಇಚ್ಛೆಯಿಂದ ರಾಜೀನಾಮೆ ನೀಡಿ ನಿವೃತ್ತರಾದರು.
 
ಸಾಹಿತ್ಯಕೃತಿಗಳು :
ಸಣ್ಣಕಥೆಗಳು: ಮೊಸರಿನ ಮಂಗಮ್ಮ,ವೆಂಕಟಿಗನಹೆಂಡತಿ,ರಂಗಪ್ಪನದೀಪಾವಳಿ, ಸುಬ್ಬಣ್ಣ,ವೆಂಕಟಸಾಮಿಯ ಪ್ರಣಯ ಮೊದಲಾದ ೭೦ಕ್ಕೂ ಅಧಿಕಕಥೆಗಳನ್ನು ಬರೆದಿದ್ದಾರೆ.
ಕಥನಕವನಗಳು: ರಾಮನವಮಿ,ಗೌಡರಮಲ್ಲಿ,ನವರಾತ್ರಿ.
ಕಾವ್ಯ: ಶ್ರೀರಾಮಪಟ್ಟಾಭಿಷೇಕ
ಕವನ ಸಂಕಲನಗಳು : ಬಿನ್ನಹ,ಅರುಣ,ತಾವರೆ,ಮಲಾರ,ಮನವಿ,ಚೆಲವು.
ಕಾದಂಬರಿ : ಚನ್ನಬಸವನಾಯಕ,ಚಿಕ್ಕವೀರರಾಜೇಂದ್ರ(ಐತಿಹಾಸಿಕ ಕಾದಂಬರಿಗಳು),ಶೇಷಮ್ಮ,ಮಾತುಗಾರ ರಾಮಣ್ಣ(ಸಾಮಾಜಿಕ)
ಅನುವಾದಿತ ಕೃತಿಗಳು : ಷೇಕ್ಸ್ ಪೀಯರನ ನಾಟಕಗಳಾದ ಕಿಂಗ್ ಲಿಯರ್,ದಿ,ಟೆಂಪೆಸ್ಟ್,ಟ್ವೆಲ್ ಫತ್ ನೈಟ್,ಹ್ಯಾಮ್ಲೆಟ್ ಗಳನ್ನು ಕನ್ನಡಕ್ಕೆ ತಂದ ಕೀರ್ತಿ ಮಾಸ್ತಿಯವರಿಗೆ ಸಲ್ಲುತ್ತದೆ.ಇತರ ಕೃತಿಗಳು-ಚಿತ್ರಾಂಗದಾ(ಠಾಕೂರರ ಕೃತಿ), ಬಿಜ್ಜಳರಾಯ ಚರಿತ್ರೆ(ಧರಣಿ ಪಂಡಿತನ ಕೃತಿ)ಬಸವಣ್ಣನ ವಚನಗಳನ್ನು ಆಂಗ್ಲ ಭಾಷೆಗೆ ಅನುವಾದ ಮಾಡಿದ್ದಾರೆ.
ವಿಮರ್ಶಾ ಗ್ರಂಥಗಳು : ಭಾರತತೀರ್ಥ,ಆದಿಕವಿವಾಲ್ಮೀಕಿ
ನಾಟಕಗಳು : ಶಾಂತಾ, ತಿರುಪಾವಿ, ಕನಕಣ್ಣ, ಶಿವಛತ್ರಪತಿ, ಯಶೋಧರ, ಮಾಸತಿ, ಅನಾರ್ಕಳಿ, ಪುರಂದರದಾಸ, ಕಾಕನಕೋಟೆ.
ಪ್ರಬಂಧ :  
ಸಂಪಾದಿತಕೃತಿಗಳು : ಕರ್ಣಾಟಕ ಭಾರತ ಕಥಾಮಂಜರಿ,ಸರ್.ಎಂ.ವಿಶ್ವೇಶ್ವರಯ್ಯ.
ನಮ್ಮ ನುಡಿ -ಕನ್ನಡ ಭಾಷಾಶಾಸ್ತ್ರ ಕುರಿತ ಅವರ ಕೃತಿ
 
ಪ್ರಶಸ್ತಿ, ಪುರಸ್ಕಾರ, ಬಿರುದು:
೧೯೨೯ರಲ್ಲಿ ನಡೆದ ೧೫ ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ
೧೯೪೨ರಲ್ಲಿ ಹೈದರಾಬಾದಿನಲ್ಲಿ ನಡೆದ ಅಖಿಲಭಾರತ ಪ್ರಾಚ್ಯ ಸಮ್ಮೇಳನದ ೧೧ನೇಯ ಅಧಿವೇಶನದ ಕನ್ನಡ ವಿಭಾಗದ ಅಧ್ಯಕ್ಷತೆ.
೧೯೪೬ರಲ್ಲಿ ಮದರಾಸಿನಲ್ಲಿ ನಡೆದ ಅಖಿಲ ಭಾರತ ಬರಹಗಾರರಸಮ್ಮೇಳನದ ಅಧ್ಯಕ್ಷತೆ.
೧೯೬೪ರಲ್ಲಿ P.E.O(Poets,essasies,opinion) ಸಂಸ್ಥೆಯ ಉಪಾಧ್ಯಕ್ಷರಾಗಿ ನಂತರ ೧೯೭೬ರಲ್ಲಿ ಅಧ್ಯಕ್ಷರೂ ಆದರು.
ಮಾಸ್ತಿಯವರು 'ಜೀವನ' ಎಂಬ ಮಾಸಪರಿಕೆಯನ್ನು ಸುಮಾರು ಎರಡು ದಶಕಗಳ ಕಾಲ ನಡೆಸಿದರು.
೧೯೭೪ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಸೇವೆ ಸಲ್ಲಿಸಿದರು.
೧೯೬೮ರಲ್ಲಿ ಮಾಸ್ತಿಯವರಸಣ್ಣಕಥೆಗಳು ಪುಸ್ತಕಕ್ಕೆ ಕೇಂದ್ರಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಸಂದಿದೆ.
ಕರ್ನಾಟಕ ಹಾಗೂ ಮೈಸೂರು ವಿಶ್ವವಿದ್ಯಾಲಯಗಳ ಗೌರವ ಡಿ.ಲಿಟ್ ಪ್ರಶಸ್ತಿ ಪಡೆದಿದ್ದಾರೆ.
೧೯೮೩ರಲ್ಲಿ ಚಿಕ್ಕವೀರ ರಾಜೇಂದ್ರಕೃತಿಗೆ ಭಾರತೀಯ ಜ್ಞಾನಪೀಠ ಪ್ರಶಸ್ತಿ ಪಡೆದರು.
 
ಮಾಸ್ತಿ ಕುರಿತು ಪ್ರಕಟಿತ ಪ್ರಮುಖ ಲೇಖನಗಳು :
ಶ್ರೀನಿವಾಸ ಸಾಹಿತ್ಯ, ಮಾಸ್ತಿವೆಂಕಟೇಶ ಅಯ್ಯಂಗಾರ ಎಂಬ ಆಂಗ್ಲ ಕೃತಿಗಳನ್ನು ಮಾನಸಗಂಗೋತ್ರಿ ಅಧ್ಯಯನ ಸಂಸ್ಥೆ ಹಾಗೂ ಉಡುಪಿಯ ಗೋವಿಂದ ಪೈ ಸಂಶೋಧನಾ ಕೇಂದ್ರಗಳು ಪ್ರಕಟಿಸಿವೆ.
ಮಾಸ್ತಿ ಅವರ ಸಣ್ಣ ಕಥೆಗಳನ್ನು ಆಕಾಶವಾಣಿ, ದೂರದರ್ಶನಗಳು ಭಿತ್ತರಿಸಿವೆ.
೧೯೭೨ರಲ್ಲಿ ಶ್ರೀನಿವಾಸ ಎಂಬ ಸಂಭಾವನಾ ಗ್ರಂಥವನ್ನು ಅರ್ಪಿಸಲಾಯಿತು.
 
ಕವಿ ಸಂದೇಶ :