ಯು.ಆರ್.ಅನಂತಮೂರ್ತಿ
ಸ್ವ-ವಿವರ
 
ಕಾವ್ಯನಾಮ :  
ನಿಜನಾಮ/ಪೂರ್ಣನಾಮ : ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ.
ಜನನ : ೧೯೩೨ ಡಿಸೆಂಬರ್ ೨೧.
ತಂದೆ : ರಾಜಗೋಪಾಲಾಚಾರ್ಯ.
ತಾಯಿ: ಸತ್ಯಭಾಮ.
ಜನ್ಮ ಸ್ಥಳ : ಶಿವಮೊಗ್ಗ ಜಿಲ್ಲೆಯ ಮೇಳಿಗೆಯಲ್ಲಿ.
ಮನೆ,ಮನೆತನ :  
ಪತ್ನಿ : ಎಸ್ತಾರ್
ಮಕ್ಕಳು :  
 
ವಿದ್ಯಾಭ್ಯಾಸ :
ಪ್ರಾಥಮಿಕ : ದೂರ್ವಾಸಪುರ ಪಾಠಶಾಲೆ.
ಪ್ರೌಢಶಾಲೆ : ತೀರ್ಥಹಳ್ಳಿ.
ಪದವಿ: ಮೈಸೂರು ವಿಶ್ವವಿದ್ಯಾನಿಲಯದಿಂದ ಇಂಗ್ಲೀಷ್ ಸಾಹಿತ್ಯದಲ್ಲಿ ಎಮ್.ಎ.ಮುಗಿಸಿ ಕಾಮನ್ ವೆಲ್ತ್ ವಿದ್ಯಾರ್ಥಿವೇತನ ಪಡೆದು ಬರ್ಮಿಂಗ್ ಹ್ಯಾಂವಿಶ್ವವಿದ್ಯಾನಿಲಯದಲ್ಲಿ ಪಿ.ಎಚ್.ಡಿ ಪಡೆದರು
 
ವೃತ್ತಿ:
ಶಿವಮೊಗ್ಗ, ಹಾಸನ, ಮೈಸೂರು ವಿಶ್ವವಿದ್ಯಾನಿಲಯದ ಕಾಲೇಜುಗಳಿಗೆ ಅಧ್ಯಾಪಕರಾದರು
ಕೊಟ್ಟಾಯಂನ ಮಹಾತ್ಮಗಾಂಧೀಜಿ ವಿಶ್ವವಿದ್ಯಾನಿಲಯದ ಕುಲಪತಿಗಳಾದರು.
ಅನೇಕ ದೇಶಗಳ ವಿಶ್ವವಿದ್ಯಾನಿಲಯಗಳಿಗೆ ಸಂದರ್ಶನ ಪ್ರಾಧ್ಯಾಪಕರಾಗಿದ್ದಾರೆ.
'ರುಜುವಾತು'ಎಂಬ ಪತ್ರಿಕೆಯ ಸಂಪಾದಕರಾಗಿದ್ದಾರೆ.
 
ಸಾಹಿತ್ಯಕೃತಿಗಳು :
ಸಣ್ಣಕಥೆಗಳು, ಕಥನಕವನಗಳು: ಎಂದೆಂದೂ ಮುಗಿಯದ ಕಥೆ- ಕಥಾ ಸಂಕಲನ
ಪ್ರಶ್ನೆ, ಆಕಾಶ ಮತ್ತು ಬೆಕ್ಕು, ಮೌನಿ, ಘಟಶ್ರಾದ್ಧ, ಬರ, ತಾಯಿ, ಹುಲಿಯ ಹೆಂಗರಳು- ಇವು ಅಪರೂಪದ ಕಥೆಗಳು
ಕಾದಂಬರಿ : ಸಂಸ್ಕಾರ-ಮೊದಲ ಕಾದಂಬರಿ
ಅವಸ್ಥೆ, ಭಾರತೀಪುರ, ಭವ.
ಕವನ ಸಂಕಲನಗಳು : ಮಿಥುನ, ಹದಿನೈದು ಪದ್ಯಗಳು, ಅಜ್ಜನ ಹೆಗಲ ಸುಕ್ಕುಗಳು.
ನಾಟಕಗಳು : ಆವಾಹನೆ
ಅನುವಾದಿತ ಕೃತಿಗಳು : ಇವರ ಸಂಸ್ಕಾರ ಕೃತಿಯು ಭಾರತೀಯ ಭಾಷೆಯಲ್ಲದೆ ಇಂಗ್ಲೀಷ್, ರಶಿಯನ್, ಫ್ರೆಂಚ್, ಜರ್ಮನ್, ಹಂಗೇರಿಯನ್ ಮತ್ತಿತರ ಭಾಷೆಗಳಿಗೆ ಭಾಷಾಂತರಗೊಂಡಿದೆ.
ವಿಮರ್ಶೆ,ಪ್ರಬಂಧಗಳು: ಪ್ರಜ್ಞೆ ಮತ್ತು ಪರಿಸರ, ಸಮಕ್ಷಮ, ಪೂರ್ವಾಪರ
ಜೀವನ ಚರಿತ್ರೆ :  
ಸಂಪಾದಿತಕೃತಿಗಳು :  
 
ಪ್ರಶಸ್ತಿ, ಪುರಸ್ಕಾರ, ಬಿರುದು:
ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದರು.
ನ್ಯಾಷನಲ್ ಬುಕ್ ಟ್ರಷ್ಟ್‌ನ ಅಧ್ಯಕ್ಷರಾಗಿದ್ದರು
೧೯೮೪ ರಲ್ಲಿ ರಾಜ್ಯೋತ್ಸವ ಪ್ರಶಸ್ತಿ
೧೯೮೭ ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಮಾಸ್ತಿ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿ ಕೂಡ ಗಳಿಸಿದ್ದಾರೆ.
೧೯೯೪ ರಲ್ಲಿ ಭಾರತೀಯ ಜ್ಞಾನಪೀಠ ಪ್ರಶಸ್ತಿ ಲಭಿಸಿತು.
ಇವರ ಕೃತಿಗಳಾದ ಘಟಶ್ರಾದ್ಧ, ಅವಸ್ಥೆ, ಸಂಸ್ಕಾರ, ಮೌನಿ ಚಲನಚಿತ್ರಗಳಾಗಿ ರಾಷ್ಟ್ರಮಟ್ಟದ ಯಶಸ್ಸು ಗಳಿಸಿದೆ.
 
ಅನಂತಮೂರ್ತಿ ಕುರಿತು ಪ್ರಕಟಿತ ಪ್ರಮುಖ ಲೇಖನಗಳು :
 
ಕವಿ ಸಂದೇಶ :