ವಿ.ಕೃ.ಗೋಕಾಕ
ಸ್ವ-ವಿವರ
 
ಕಾವ್ಯನಾಮ : ವಿನಾಯಕ
ನಿಜನಾಮ/ಪೂರ್ಣನಾಮ : ವಿನಾಯಕ ಕೃಷ್ಣ ಗೋಕಾಕ
ಜನನ : ೧೯೦೯.
ಮರಣ : ೧೯೯೨ ಏಪ್ರಿಲ್ ೨೮.
ತಂದೆ : ಕೃಷ್ಣ ಗೋಕಾಕ.
ತಾಯಿ: ಸುಂದರಮ್ಮ
ಜನ್ಮ ಸ್ಥಳ : ಹಾವೇರಿ ಜಿಲ್ಲೆಯ ಸವಣೂರು.
ಪತ್ನಿ :  
ಮಕ್ಕಳು : ಅನಿಲ್ ಗೋಕಾಕ್.
 
ವಿದ್ಯಾಭ್ಯಾಸ :
ಪ್ರಾಥಮಿಕ : ಸವಣೂರು
ಪ್ರೌಢಶಾಲೆ : ಸವಣೂರು
ಕಾಲೇಜು : ೧೯೨೯ ರಲ್ಲಿ ಕರ್ನಾಟಕ ಕಾಲೇಜಿನಿಂದ ಬಿ.ಎ. ಪದವಿ.
ಪದವಿ: ೧೯೩೧ ರಲ್ಲಿ ಎಂ.ಎ.
೧೯೩೬ ರಲ್ಲಿ ಉನ್ನತ ವ್ಯಾಸಂಗಕ್ಕಾಗಿ ಇಂಗ್ಲೆಂಡ್‌ಗೆ ಪ್ರಯಣ.
 
ವೃತ್ತಿ:
ಆಕ್ಸ್ ಫರ್ಡ್ ನಿಂದ ಬಂದ ಮೇಲೆ ಶಿಕ್ಷಕರಾಗಿ ವೃತ್ತಿ ಜೀವನ ಪ್ರಾರಂಭ.
೧೯೪೦ ರಲ್ಲಿ ಸಾಂಗ್ಲಿಯ ವಿಲಿಂಗ್ಡನ್.೧೯೪೬ ರಲ್ಲಿ ಗುಜರಾತಿನ ವೀಸನಗರ.
೧೯೪೯ ರಲ್ಲಿ ಕೊಲ್ಲಾಪುರದ ರಾಜಾರಾಮ ಕಾಲೇಜುಗಳಲ್ಲಿ ಪ್ರಾಚಾರ್ಯರಾಗಿದ್ದರು.
೧೯೫೨ ರಲ್ಲಿ ಧಾರವಾಡದ ಕರ್ನಾಟಕ ಕಾಲೇಜಿಗೆ ಪ್ರಾಚಾರ್ಯರಾದರು.
೧೯೬೬ ರಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದರು.
ಧಾರವಾಡದ ಮನೋಹರ ಗ್ರಂಥಮಾಲೆ ಪ್ರಕಾಶನ ದವರಿಗೆ ಸಲಹೆಗಾರರಾಗಿದ್ದರು.
 
ಸಾಹಿತ್ಯಕೃತಿಗಳು :
೧೯೨೯ರಿಂದಲೇ ಬೇಂದ್ರೆಯವರ ಗೆಳೆಯರ ಗುಂಪಿನ ಸದಸ್ಯರಾಗಿದ್ದರು.
ಕಾದಂಬರಿ : ಸಮರಸವೇ ಜೀವನ- ಇಜ್ಜೋಡು, ಅಂತ:ಸತ್ವ, ಪ್ರೀತಿಯ ಯೋಗ ಮಾಯೆ, ಏರಿಳಿತ, ಸಮುದ್ರಯಾನ, ನಿರ್ವಹಣ ಆರು ಭಾಗಗಳು.
ಕಾವ್ಯ: ಭಾರತ ಸಿಂಧುರಶ್ಮಿ-ಮಹಾಕಾವ್ಯ. ಇದರ ಪ್ರಥಮ ಸಂಪುಟದಲ್ಲಿ ಐದು ಕಾಂಡಗಳು, ದ್ವಿತೀಯ ಸಂಪುಟದಲ್ಲಿ ಏಳು ಕಾಂಡಗಳಿವೆ. ೩೬,೪೦೦ ಪಂಕ್ತಿಗಳಿಂದ ಕೂಡಿದೆ.
ಕವನ ಸಂಕಲನಗಳು : ೧೯೩೪ರಲ್ಲಿ ಮೊದಲ ಕವನ ಸಂಕಲನ ಕಲೋಪಾಸಕ ಪ್ರಕಟವಾಯಿತು.
ಪಯಣ, ಸಮುದ್ರ ಗೀತೆಗಳು, ತಿವಿಕ್ರಮರ ಆಕಾಶ ಗಂಗೆ, ಕಾಶ್ಮೀರ, ಭಾವರಾಗ, ಪಾರಿಜಾತದಡಿಯಲ್ಲಿ,ಊರ್ಣನಾಭ, ಅಭ್ಯುದಾಯ, ಉಗಮ. ಬಾಳದೇಗುಲದಲ್ಲಿ, ದ್ಯಾವಪೃಥಿವಿ-ನವ್ಯ ಕವಿತೆಗಳು.
ನಾಟಕಗಳು : ಜನನಾಯಕ, ಯುಗಾಂತರ, ಶ್ರೀಮಂತರು, ಮುನಿದ ಮಾರಿ.
ಪ್ರವಾಸ ಕಥನ: ಸಮುದ್ರದಾಚೆಯಿಂದ, ಸಮುದ್ರದೀಚೆಯಿಂದ
ವಿಮರ್ಶಾ ಗ್ರಂಥಗಳು,ಪ್ರಬಂಧ : ಇಂದಿನ ಕನ್ನಡ ಕಾವ್ಯಗಳ ಗೊತ್ತು ಗುರಿಗಳು, ವಿಶ್ವ ಮನವ ಸೃಷ್ಟಿ, ಅರ್ಪಣ ದೃಷ್ಟಿ, ಸೌಂದರ್ಯ ಮೀಮಾಂಸೆ. ಇಪ್ಪತ್ತಕ್ಕೂ ಹೆಚ್ಚು ಇಂಗ್ಲೀಷ್ ಕೃತಿಯನ್ನು ರಚಿಸಿದರು.
ಜೀವನ ಚರಿತ್ರೆ :  
ಸಂಪಾದಿತಕೃತಿಗಳು :  
 
ಪ್ರಶಸ್ತಿ, ಪುರಸ್ಕಾರ, ಬಿರುದು:
೧೯೫೮ರಲ್ಲಿ ಬಳ್ಳಾರಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
೧೯೭೮ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಉಪಾಧ್ಯಕ್ಷರಾಗಿದ್ದರು ನಂತರ ೧೯೮೩ರಲ್ಲಿ ಅಧ್ಯಕ್ಷರಾದರು.
೧೯೬೦ರಲ್ಲಿ 'ದ್ಯಾವ ಪೃಥವಿ'ಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಲಭಿಸಿತು
೧೯೬೧ ರಲ್ಲಿ ಪದ್ಮಶ್ರೀ ಪ್ರಶಸ್ತಿ.
ಕರ್ನಾಟಕ ವಿಶ್ವವಿದ್ಯಾಲಯ ಹಾಗೂ ಕ್ಯಾಲೀಫೋರ್ನಿಯಾ ಫೆಸಿಫಿಕ್ ವಿಶ್ವವಿದ್ಯಾನಿಲಯಗಳ ಗೌರವ ಡಾಕ್ಟರೇಟ್ ಪದವಿ.
೧೯೯೧ ರಲ್ಲಿ 'ಭಾರತ ಸಿಂಧು ರಶ್ಮಿ' ಕೃತಿಗೆ ಜ್ಞಾನಪೀಠ ಪ್ರಶಸ್ತಿ ಪಡೆದರು.
ಭಾರತೀಯ ವಿದ್ಯಾಭವನದ ರಾಜಾಜಿ ಪ್ರಶಸ್ತಿ
 
ಗೋಕಕರನ್ನು ಕುರಿತು ಪ್ರಕಟಿತ ಪ್ರಮುಖ ಲೇಖನಗಳು :
ವಿನಾಯಕ ವಾಙ್ಮಯ-ಅಭಿನಂದನಾ ಗ್ರಂಥ.
 
ಕವಿ ಸಂದೇಶ :
ಕನ್ನಡಿಗನು ಜನ್ಮಸಿದ್ಧವಾದ ವಿಶ್ವಮಾನವತೆಯನ್ನು ಕಾಯ್ದುಕೊಳ್ಳಬೇಕದಾರೆ ಬರಿ ಲಲಿತ ಸಾಹಿತ್ಯ ಸಾಕಾಗದು. ವಿಧ ವಿಧ ಜ್ಞಾನ ಸಂಪತ್ತಿನಿಂದ ತುಂಬಿದ ಮೂರು ಕಣಜಗಳು ಅವನ ವಶವಾಗಿರಬೇಕು.
ಮನುಕುಲದ ಕವಿಯಾಗು, ಕುಲಕೋಟಿಗಳನು ತಿಳಿ ಯಾವ ನುಡಿಯನೆ ಇರಲಿ ವಾಣಿ ನುಡಿದು.