ಡಿ.ವಿ. ಗುಂಡಪ್ಪ
 
ಸ್ವ-ವಿವರ
 
ಕಾವ್ಯನಾಮ : ಡಿವಿಜಿ
ನಿಜನಾಮ/ಪೂರ್ಣನಾಮ : ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ.
ಜನನ : ೧೮೮೭ ಮಾರ್ಚ್ ೧೭.
ಮರಣ : ೧೯೭೫ ಅಕ್ಟೋಬರ್ ೭, ಬೆಂಗಳೂರು
ತಂದೆ : ದೇವನಹಳ್ಳಿ ವೆಂಕಟರಮಣಯ್ಯ
ತಾಯಿ: ಅಲಮೇಲು
ಜನ್ಮ ಸ್ಥಳ : ಮುಳುಬಾಗಿಲು
ಮನೆ,ಮನೆತನ :  
ಪತ್ನಿ : ಭಾಗೀರಥಮ್ಮ
ವಿವಾಹವಾದ ದಿನ :  
ಮಕ್ಕಳು : ಬಿ.ಜಿ.ಎಲ್. ಸ್ವಾಮಿ, ಇಂದಿರಾ.
 
ವಿದ್ಯಾಭ್ಯಾಸ :
ಪ್ರಾಥಮಿಕ : ಮುಳುಬಾಗಿಲು.
ಪ್ರೌಢಶಾಲೆ : ಕೋಲಾರ ಮತ್ತು ಮೈಸೂರು.
ಕಾಲೇಜು:  
 
ವೃತ್ತಿ:
ಶಿಕ್ಷಕರಾಗಿ ವೃತ್ತಿ ಜೀವನ ಪ್ರಾರಂಭ.
೧೯೦೭ರಲ್ಲಿ ಪತ್ರಿಕೋದ್ಯಮಕ್ಕೆ ಪಾದಾರ್ಪಣೆ ಮಾಡಿದರು.
ಸೂರ್ಯೋದಯ ಪ್ರಕಾಶಿಕಾ, ಮೈಸೂರು ಸ್ಟಾಂಡರ್ಡ್, ಈವನಿಂಗ್ ಮೈಲ್, ಮೈಸೂರು ಟೈಮ್ಸ್. ಪತ್ರಿಕೆಗಳಲ್ಲಿ ಕೆಲಸ ಮಾಡಿ ಮದರಾಸಿಗೆ ಹೋಗಿ ಅಲ್ಲಿನ ಪತ್ರಿಕೆಗಳಿಗೆ ಕೆಲಕಾಲ ದುಡಿದರು.
೧೯೧೩ರಲ್ಲಿ ಬೆಂಗಳೂರಿಗೆ ಬಂದು ತಾವೇ ಕರ್ನಾಟಕ ಎಂಬ ಅರ್ಧವಾರಪತ್ರಿಕೆಯನ್ನು ಪ್ರಾರಂಭಿಸಿದರು.
೧೯೨೧ರಲ್ಲಿ ಇಂಡಿಯನ್ ರೆವ್ಯೂ ಆಫ್ ರೆವ್ಯೂಸ್ ಎಂಬ ಆಂಗ್ಲ ಮಾಸಪತ್ರಿಕೆ ಪ್ರಾರಂಭಿಸಿದರು.
೧೯೨೩ರ ನಂತರ ಕರ್ನಾಟಕ ಜನಜೀವನ ಮತ್ತು ಅರ್ಥಸಾಧಕ ಎಂಬ ಪತ್ರಿಕೆ ನಡೆಸಿದರು. ಹೀಗೆ ಪತ್ರಿಕೋದ್ಯಮಕ್ಕೆ ನಾನಾ ಕೊಡುಗೆಯನ್ನು ನೀಡಿದರು.
 
ಸಾಹಿತ್ಯಕೃತಿಗಳು :
ಕಥನಕವನಗಳು: ಕುಗ್ಗಿದ ಮನಸ್ಸಿಗೆ ಸಾಂತ್ವನ ನೀಡುವಂತಹ ಮಹನ್ನೋತ ಕೃತಿ 'ಮಂಕುತಿಮ್ಮಕಗ್ಗ' ಅಪಾರ ಜನಮನ್ನಣೆ ಗಳಿಸಿತು. ಅದರ ಜೊತೆಗೆ 'ಮರುಳ ಸಿದ್ಧನ ಕಗ್ಗ'ವನ್ನು ಬರೆದರು.
ಬಾಳಿಗೊದು ನಂಬಿಕೆ, ಸಾಹಿತ್ಯ ಶಕ್ತಿ-ಅನುವಾದಗಳು
ಕಾವ್ಯ: ವಸಂತಕುಸುಮಾಂಜಲಿ, ನಿವೇದನೆ.
ಕವನ ಸಂಕಲನಗಳು : ಅಂತ:ಪುರ ಗೀತೆಗಳು, ಗೀತಶಾಕುಂತಲಂ. ಇತರ ಕೃತಿಗಳು-ಉಮರನ ಒಸುಗೆ, ಮ್ಯಾಕ್ ಬೆತ್, ಪದ್ಯಾನುವಾದಗಳು
ಪ್ರಬಂಧಗಳು: ಜೀವನ ಸೌಂದರ್ಯ ಮತ್ತು ಸಾಹಿತ್ಯ.
ವಿಮರ್ಶಾ ಗ್ರಂಥಗಳು : ಕಾವ್ಯ ಸೌಂದರ್ಯ ಮೀಮಾಂಸೆ, ದೇವರು, ಪುರುಷಸೂಕ್ತ, ಶ್ರೀಮದ್ಭಾಗವದ್ಗೀತಾ ತಾತ್ಪರ್ಯ ಅಥವಾ ಜೀವನ ಧರ್ಮ ಯೋಗ, ಋತು-ಸತ್ಯ-ಧರ್ಮ, ಜ್ಞಾಪಕ ಶಾಲೆ, ಕಲೋಪಾಸಕರು, ಸಂಕೀರ್ಣ ಸ್ಮೃತಿ.
ಜೀವನ ಚರಿತ್ರೆ : ಗೋಪಾಲಕೃಷ್ಣ ಗೋಖಲೆ, ವಿದ್ಯಾರಣ್ಯ ವೃತ್ತಾಂತ, ರಂಗಾಚಾರ್ಯಲು.
ಇನ್ನಿತರ ಕೃತಿಗಳು: ಬೆಕ್ಕೋಜಿ, ತಿಲೋತ್ತಮೆ, ವೃತ್ತ ಪತ್ರಿಕೆ, ರಾಜ್ಯಾಂಗ ತತ್ವಗಳು, ರಾಜ್ಯ ಕುಟುಂಬ
 
ಪ್ರಶಸ್ತಿ, ಪುರಸ್ಕಾರ, ಬಿರುದು:
೧೯೬೧ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಗೌರವ ಡಿ.ಲಿಟ್ ನೀಡಿತು.
೧೯೬೭ರಲ್ಲಿ ಶ್ರೀಮದ್ಭಾಗವದ್ಗೀತಾ ತಾತ್ಪರ್ಯ ಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತು.
೧೯೩೬ರಲ್ಲಿ ಮಡಿಕೇರಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.
೧೯೭೪ರಲ್ಲಿ ಪದ್ಮಭೂಷಣ ಪ್ರಶಸ್ತಿ ಲಭಿಸಿತು.
 
ಕವಿ ಕುರಿತು ಪ್ರಕಟಿತ ಪ್ರಮುಖ ಲೇಖನಗಳು :
ಕುಸುಮಾಂಜಲಿ, ಧೀಮಂತ
 
ಕವಿ ಸಂದೇಶ :
ಸಾಹಿತ್ಯ ಗುಣವು ಮುಖ್ಯವಾಗಿ ಜನಜೀವನ ಗುಣದ ಪ್ರತಿಫಲ. ಲೇಖಕನಿಗೆ ಬೇಕಾಗಿರುವ ಕಾವ್ಯ ಹುರುಪು ಮುಖ್ಯವಾಗಿ ಅವನ ಸುತ್ತುಮುತ್ತಲಿರುವ ಸನ್ನಿವೇಶಗಳಿಂದ ದೊರೆಯಬೇಕು.
ತನ್ನ ಲೇಖನಕ್ಕೆ ಜೀವ ಕೊಡುವ ಪ್ರವೃತ್ತಿಯನ್ನು ತನ್ನ ಪ್ರೇರಣೆಯನ್ನು ತನ್ನ ಸಮಾಜದಿಂದ ಅವನು ಸಂಪಾದಿಸಿಕೊಳ್ಳಬೇಕು.
ಹೀಗಾಗಲು, ಆ ಸಮಾಜವು ಉತ್ಕರ್ಷಕಗಳಾದ ಪ್ರವೃತ್ತಿಗಳಿಂದಲೂ ಉಜ್ವಲಗಳಾದ ಪ್ರೇರಣೆಗಳಿಂದಲೂ ಕೂಡಿದ್ದಾಗಿರಬೇಕು. ನೂತನ ಸಂದೇಹ, ವಿಮರ್ಶನೆ, ನೂತನ ತತ್ವ ಪರಿಶೋಧನೆ- ಇವು ಲೇಖಕರಿಗೆ ಬೇಕಾದ ವಾತಾವರಣ.