~~~ ಧನ್ಯವಾದಗಳು ~~~
 
ಧನ್ಯವಾದಗಳು ಈ ಎಲ್ಲಾ ಮಹನೀಯರಿಗೆ

ನಮ್ಮೆಲ್ಲ ಹುಡುಗಾಟ, ಹುಚ್ಚಾಟಗಳನ್ನು ಸಹಿಸಿಕೊಂಡು ನಮ್ಮನ್ನು ಅನಿವಾರ್ಯವಾಗಿ ಒಪ್ಪಿಕೊಂಡು, ಏನಾದರೂ ಮಾಡಿ, ಒಟ್ಟಿನಲ್ಲಿ ಒಳ್ಳೆದು ಮಾಡಿ ಸಾಕು ಎಂದು ಬೈಗುಳ ರೂಪದಿ ಹಾರೈಸುವ ನಮ್ಮ ತಂದೆ- ತಾಯಿ ಹಾಗೂ ಕುಟುಂಬ ವರ್ಗದವರ ಸಹಕಾರವನ್ನು ಸ್ಮರಿಸುತ್ತೇವೆ.

ಕಳೆದ ವರ್ಷ ಪ್ರಾರಂಭವಾದ ಕನ್ನಡಕವಿ ಅಂತರ್ಜಾಲತಾಣವು ಹಲವಾರು ಕಾರಣಗಳಿಂದ ಬದಲಾವಣೆ ಕಾಣದೆ ಮಂಕಾಗಿತ್ತು. ಈ ಸಂದರ್ಭದಲ್ಲಿ ಐಡಿ ಟೆಕ್ನಾಲಜೀಸ್ ನ ಪ್ರಶಾಂತ್ ಕಲ್ಲೂರ್ ಅವರು ವೆಬ್ ಸೈಟ್ ಗೆ ಹೊಸರೂಪ ನೀಡುವ ಭರವಸೆಯನ್ನು ನೀಡಿದರು. ಅದರಂತೆ ಭರವಸೆಯನ್ನು ಈಡೇರಿಸಿದ್ದಾರೆ. ಕನ್ನಡಕವಿ ಈಗ ಯೂನಿಕೋಡ್ ಆವೃತ್ತಿಯಲ್ಲಿ ಕಾಣಿಸಲಿದೆ. ವೆಬ್ ಸೈಟ್ ಗೆ ಹೊಸ ರೂಪ ನೀಡುವ ಕಾಯಕವನ್ನು ಕೇವಲ ಹತ್ತರಲ್ಲಿ ಇನ್ನೊಂದು ಯೋಜನೆ ಎಂದು ಪರಿಗಣಿಸಿದೆ, ಅದಕ್ಕೆ ಅಗತ್ಯವಾದ ದೇಸಿ ವಿನ್ಯಾಸ ನೀಡಿ ಯೋಜನೆಯನ್ನು ಪೂರ್ಣಗೊಳಿಸುತ್ತಾ, ಕವಿಗಳ ಬಗ್ಗೆ ಹೆಚ್ಚು ತಿಳಿಯಲು ಆಸಕ್ತಿವಹಿಸಿದ ಐಡಿ ಟೆಕ್ ನ ಪಿ. ಸುಮ ಅವರನ್ನು ಇಲ್ಲಿ ನೆನೆಯಲೇ ಬೇಕು. ಈ ಯೋಜನೆಯಲ್ಲಿ ಆಸಕ್ತಿವಹಿಸಿ, ಶ್ರದ್ಧೆಯಿಂದ ಹೊಸ ವಿನ್ಯಾಸ ನೀಡಿದ ಪಿ. ಸುಮ ಅವರಿಗೆ ಕನ್ನಡಕವಿ ಬಳಗ ಆಭಾರಿಯಾಗಿದೆ. ಇದರ ಜೊತೆಗೆ ಈ ಯೋಜನೆಯನ್ನು ಸಾಕಾರಗೊಳಿಸಲು ಸಹಕಾರ ನೀಡಿದ ಐಡಿ ಟೆಕ್ನಾಲಜೀಸ್ ನ ಸಿಬ್ಬಂದಿ ಹಾಗೂ ಮಿತ್ರವರ್ಗಕ್ಕೆ ನಮ್ಮ ಹೃತ್ಪೂರ್ವಕ ವಂದನೆಗಳು.
ಬರಹ ನಿರ್ಮಾತೃ ಶ್ರೀ ಶೇಷಾದ್ರಿ ವಾಸು ಹಾಗೂ ನುಡಿ ತಂತ್ರಾಂಶ ರೂಪಕರಿಗೆ.


ಬರಹ ನಿರ್ಮಾತೃ ಶ್ರೀ ಶೇಷಾದ್ರಿ ವಾಸು ಹಾಗೂ ನುಡಿ ತಂತ್ರಾಂಶ ರೂಪಕರಿಗೆ.
ಶ್ರೀಮತಿ ಜಯಮ್ಮ ಕರಿಯಣ್ಣ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು
ಶ್ರೀ ಹೇಮಾದ್ರಿ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು
ಶ್ರೀ ಸತೀಶ್ ಗೌಡ, ಅವಿರತ ಟ್ರಸ್ಟ್, ಬೆಂಗಳೂರು ಹಾಗೂ ಟ್ರಸ್ಟ್ ನ ಇತರ ಸದಸ್ಯರು.
ಶ್ರೀ ಸೋಮಶೇಖರ ಹೊಸಮನಿ, ಅವಿರತ ಟ್ರಸ್ಟ್, ಅಮೆರಿಕ.
ಶ್ರೀ ಪ್ರಕಾಶ್ ಶೆಟ್ಟಿ ಉಳೈಪಾಡಿ, ಪ್ರಕಾಶಕ.ಕಾಂ, ಮಂಗಳೂರು
ಶ್ರೀ ಆರ್.ಜೆ. ಹಳ್ಳಿ ನಾಗರಾಜ, ಪತ್ರಕರ್ತರು, ಬೆಂಗಳೂರು.
ಶ್ರೀ ರಘುನಂದನಾಚಾರ್ಯ, ಶ್ರೀರಾಘವೇಂದ್ರಸ್ವಾಮಿ ಮಠ, ನವದೆಹಲಿ.
ಶ್ರೀ ವೆಂಕಟೇಶಯ್ಯ, ನಿವೃತ್ತ ತಂತ್ರಜ್ಞರು(ಬಿ.ಇ.ಎಲ್),ಜಯನಗರ, ಬೆಂಗಳೂರು.
ಶ್ರೀ ಹರೀಶ್ ಕೆದಿಲಾಯ, ಸಾಫ್ಟ್ ವೇರ್ ಇಂಜಿನಿಯರ್, ಬೇಗೂರು, ಬೆಂಗಳೂರು.
ಶ್ರೀ ಬಿ.ಎಚ್. ದಾರುಕೇಶ, ವಿಜ್ಞಾನಿ,ಇಸ್ರೋ ಕೇಂದ್ರ, ಬೆಂಗಳೂರು ಹಾಗೂ ಸಹದ್ಯೋಗಿಗಳು.
ಶ್ರೀ ಯು.ಬಿ. ಪವನಜ, ವಿಶ್ವಕನ್ನಡ.ಕಾಂ, ಬೆಂಗಳೂರು.
ಶ್ರೀ ಜಿ.ಎಸ್. ಚಂದ್ರಶೇಖರ್, ಶಂಕರ್ ಅವರ ವ್ಯಕ್ತಿ ಚಿತ್ರಕಲಾಗಾರ, ಬೆಂಗಳೂರು
ಶ್ರೀ ತಳಕು ಶ್ರೀನಿವಾಸರಾವ್, ಮುಂಬಯಿ.
ಶ್ರೀ ಪ್ರಶಾಂತ್ ಬೀಚಿ, ತಾಂಜಾನಿಯಾ.
ಶ್ರೀ ಸತ್ಯಮೂರ್ತಿ ಆನಂದೂರು, ಲೇಖಕರು, ಬೆಂಗಳೂರು.
ಶ್ರೀ ಬಿ.ಎಸ್. ವಿದ್ಯಾರಣ್ಯ, ಲೇಖಕರು, ಬೆಂಗಳೂರು.
ಶ್ರೀ ರಾಜಕುಮಾರ ಹಾಗೂ ಸ್ನೇಹಿತರು, ಸಮಾಜಸೇವಕರಸಮಿತಿ, ಬೆಂಗಳೂರು.
ಶ್ರೀಮತಿ ನಿಶ್ಚಿತಾ ಟಿ.ಎಸ್ ಹಾಗೂ ಐ.ಬಿ.ಎಂ ಸಂಸ್ಥೆಯ ಸಾಹಿತ್ಯಪ್ರೇಮಿಗಳು.
ಶ್ರೀಮತಿ ರಾಜಲಕ್ಷ್ಮಿ ಕೋಡಿಬೆಟ್ಟು, ಪತ್ರಕರ್ತೆ, ಬೆಂಗಳೂರು.
ಶ್ರೀ ಲಕ್ಷ್ಮಿಕಾಂತ ಬಸ್ರಿಕಟ್ಟೆ, ವಿನ್ಯಾಸಕಾರ, ಬೆಂಗಳೂರು.
ಶ್ರೀ ಹರೀಶ್. ಕೆ. ಆದೂರು, ಪತ್ರಕರ್ತರು, ಮಂಗಳೂರು.
ಶ್ರೀ ಗಗನ್ ಹಾಗೂ ಅನಿಲ್ ಮುತ್ತುಗುಂಡಿ, ಗಂಧದಗುಡಿ.ಕಾಂ, ಬೆಂಗಳೂರು
ಶ್ರೀ ಶಿವಕೇಶವ, ಆನೇಕಲ್, ಬೆಂಗಳೂರು.
ಶ್ರೀ ಮಹದೇವಸ್ವಾಮಿ, ಆನೇಕಲ್, ಬೆಂಗಳೂರು
ಕುಮಾರಿ ಲವಿನಾ ಪ್ರಿಯ ಲೋಬೊ, ಬೆಂಗಳೂರು.
ಶ್ರೀ ಎಸ್.ಕೆ. ಶಾಮಸುಂದರ ಹಾಗೂ ಸಿಬ್ಬಂದಿ ವರ್ಗ, ದಟ್ಸ್ ಕನ್ನಡ.ಕಾಂ,ಬೆಂಗಳೂರು
ಶ್ರೀ ರವಿ.ಕೆ.ರೆಡ್ಡಿ ಹಾಗೂ ವಿಕ್ರಾಂತ ಬಳಗದ ಸದಸ್ಯರು.
 

ಕೊನೆಯದಾಗಿ ಹಾಗೂ ಮುಖ್ಯವಾಗಿ
ಎಲ್ಲಕ್ಕಿಂತ ಹೆಚ್ಚಾಗಿ ಅಗತ್ಯ ಮಾಹಿತಿ ಹಾಗೂ ಮಾರ್ಗದರ್ಶನ ನೀಡಿದ ಹಿರಿಯ ಸಾಹಿತಿಗಳಾದ ಶ್ರೀ ಎಂ. ಚಿದಾನಂದ ಮೂರ್ತಿ ಹಾಗೂ ಶ್ರೀ ಹಂ.ಪ. ನಾಗರಾಜಯ್ಯ ಅವರಿಗೆ ನಮ್ಮ ವಿಶೇಷ ವಂದನೆಗಳು. ಹಾಗೂ ಈ ಯೋಜನೆಗೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲಾ ಸಹೃದಯತಿಗೆ ನಮ್ಮ ಹೃತ್ಪೂರ್ವಕ ವಂದನೆಗಳು.
ಗ್ರಂಥ ಋಣ
ನಮ್ಮ ಯೋಜನೆಗಾಗಿ ನಾವು ಬಳಸಿದ ಹೊತ್ತಿಗೆಗಳ ಪಟ್ಟಿ
ಕನ್ನಡ ನುಡಿ ನಿಪುಣರು
ಪ್ರಕಾಶಕರು- ಕನ್ನಡ ಸಾಹಿತ್ಯ ಪರಿಷತ್ತು-
ಲೇಖಕರು-ನಾ. ರೇವಣಸಿದ್ದಪ್ಪ

ಕನ್ನಡ ಸಾಹಿತ್ಯ ಚರಿತ್ರೆ
ಪ್ರಕಾಶಕರು- ಚೇತನ ಪುಸ್ತಕಾಲಯ, ಮೈಸೂರು
ಲೇಖಕರು- ಪಂಡಿತ ಹೆಚ್. ನಂಜೇಗೌಡ

ಕರ್ನಾಟಕದ ಕವಿಗಳು
ಪ್ರಕಾಶಕರು- ಪ್ರಕಾಶ ಸಾಹಿತ್ಯ, ಬೆಂಗಳೂರು
ಲೇಖಕರು- ಬೆ. ಗೋ. ರಮೇಶ್

ಚುಕ್ಕಿಚಿತ್ರದಲ್ಲಿ ಶತಸಾಹಿತಿಗಳು
ಲೇಖಕರು- ಮೋಹನ್ ವರ್ಣೇಕರ್

ನಾಡಿನ ವಿವಿಧ ದಿನಪತ್ರಿಕೆಗಳಾದ ವಿಜಯಕರ್ನಾಟಕ, ಪ್ರಜಾವಾಣಿ, ಕನ್ನಡ ಪ್ರಭ..ಇತ್ಯಾದಿ

~~~~~~~~~~~~~~~~~~